ಬಳಕೆಯ ನಿಯಮಗಳು – INDUS APPSTORE

ಕೊನೆಯದಾಗಿ ನವೀಕರಿಸಿದ ದಿನಾಂಕ: 31-ಜನವರಿ-25

ಈ ದಾಖಲೆಯು ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ನಿಯಮಗಳ ಪ್ರಕಾರ ಮತ್ತು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರಿಂದ ತಿದ್ದುಪಡಿ ಮಾಡಲಾದ ವಿವಿಧ ಕಾನೂನುಗಳಲ್ಲಿನ ಎಲೆಕ್ಟ್ರಾನಿಕ್ ದಾಖಲೆಗಳಿಗೆ ಸಂಬಂಧಿಸಿದ ತಿದ್ದುಪಡಿ ಮಾಡಿದ ಉಪಬಂಧಗಳ ಪ್ರಕಾರ ರಚಿಸಿದ ಎಲೆಕ್ಟ್ರಾನಿಕ್ ದಾಖಲೆಯಾಗಿದೆ. ಈ ದಾಖಲೆಯನ್ನು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2023 ರ ನಿಯಮ 3(1) ರ ಅನುಸಾರವಾಗಿ ಪ್ರಕಟಿಸಲಾಗಿದೆ. ಈ ಎಲೆಕ್ಟ್ರಾನಿಕ್ ದಾಖಲೆಯನ್ನು ಕಂಪ್ಯೂಟರ್ ಸಿಸ್ಟಂನಿಂದ ರಚಿಸಲಾಗಿದ್ದು ಯಾವುದೇ ಭೌತಿಕ ಅಥವಾ ಡಿಜಿಟಲ್ ಸಹಿಗಳ ಅಗತ್ಯವಿರುವುದಿಲ್ಲ.

A. ಸ್ವೀಕಾರ:

Indus Appstore ಗೆ ನೋಂದಾಯಿಸುವ, ಪ್ರವೇಶಿಸುವ ಅಥವಾ ಅದನ್ನು ಬಳಸುವ ಮೊದಲು ದಯವಿಟ್ಟು ನಿಯಮಗಳನ್ನು (ಕೆಳಗೆ ವ್ಯಾಖ್ಯಾನಿಸಲಾಗಿದೆ) ಎಚ್ಚರಿಕೆಯಿಂದ ಓದಿ. ಈ ನಿಯಮಗಳು ನಿಮ್ಮ (ಕೆಳಗೆ ವ್ಯಾಖ್ಯಾನಿಸಲಾಗಿದೆ) ಮತ್ತು Indus Appstore ಪ್ರೈವೇಟ್ ಲಿಮಿಟೆಡ್ ನಡುವೆ ಕಾನೂನುಬದ್ಧವಾಗಿ ಬಂಧಿಸುವ ಒಪ್ಪಂದವನ್ನು ರೂಪಿಸುತ್ತವೆ. ಇದನ್ನು ಕಂಪನಿಗಳ ಕಾಯ್ದೆ, 2013 ರ ಅಡಿಯಲ್ಲಿ ಸಂಯೋಜಿಸಲಾಗಿದೆ. ಇದು ನೋಂದಾಯಿತ ಕಚೇರಿಯನ್ನು ತನ್ನ ಆಫೀಸ್-2, ಮಹಡಿ 4, ವಿಂಗ್ B, ಬ್ಲಾಕ್ A, ಸಲಾರ್‌ಪುರಿಯಾ ಸಾಫ್ಟ್‌ಜೋನ್, ಬೆಳ್ಳಂದೂರು ಗ್ರಾಮ, ವರ್ತೂರು ಹೋಬಳಿ, ಹೊರ ವರ್ತುಲ ರಸ್ತೆ, ಬೆಂಗಳೂರು ದಕ್ಷಿಣ, ಬೆಂಗಳೂರು- 560103, ಕರ್ನಾಟಕ (ಇನ್ನು ಮುಂದೆ “Indus” ಎಂದು ಉಲ್ಲೇಖಿಸಲಾಗುತ್ತದೆ) ಭಾರತದಲ್ಲಿ ಹೊಂದಿದ್ದು, ಇದು Indus Appstore ಸೇವೆಗಳ ನಿಮ್ಮ ಬಳಕೆಯನ್ನು ನಿಯಂತ್ರಿಸುತ್ತದೆ (ಕೆಳಗೆ ವ್ಯಾಖ್ಯಾನಿಸಲಾಗಿದೆ). ನೀವು ಮತ್ತು/ಅಥವಾ Indus Appstore ನಲ್ಲಿ ನಿಮ್ಮ ಖಾತೆಯನ್ನು ಬಳಸುವ ಯಾವುದೇ ಇತರ ವ್ಯಕ್ತಿಯಿಂದ Indus Appstore ಸೇವೆಗಳನ್ನು ಪಡೆಯುವುದಕ್ಕೆ ಸಂಬಂಧಿಸಿದಂತೆ Indus Appstore ಬಳಕೆಯನ್ನು ಮುಂದುವರಿಸುವ ಮೂಲಕ, ನೀವು ನಿಯಮಗಳನ್ನು ಓದಿದ್ದೀರಿ ಮತ್ತು ನಿಯಮಗಳಿಗೆ ಬದ್ಧರಾಗಿರಲು ಒಪ್ಪುತ್ತೀರಿ ಎಂದು ಈ ಮೂಲಕ ಸಮ್ಮತಿಸುತ್ತೀರಿ ಮತ್ತು ಅಂಗೀಕರಿಸುತ್ತೀರಿ. ನೀವು ನಿಯಮಗಳಿಗೆ ಒಪ್ಪದಿದ್ದರೆ ಅಥವಾ ನಿಯಮಗಳಿಗೆ ಬದ್ಧರಾಗಿರಲು ಬಯಸದಿದ್ದರೆ, ನೀವು ತಕ್ಷಣವೇ Indus Appstore ಸೇವೆಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಈ ನಿಯಮಗಳ ನಿಮ್ಮ ಅನುಸರಣೆಗೆ ಒಳಪಟ್ಟು, Indus Appstore ಸೇವೆಗಳನ್ನು ಪಡೆಯಲು Indus ನಿಮಗೆ ವೈಯಕ್ತಿಕ, ವಿಶೇಷವಲ್ಲದ, ವರ್ಗಾಯಿಸಲಾಗದ, ಸೀಮಿತ ಪರವಾನಗಿಯನ್ನು ನೀಡುತ್ತದೆ.

B. ವ್ಯಾಖ್ಯಾನಗಳು ಮತ್ತು ಅರ್ಥ ವಿವರಣೆ:

a. “ನಿಯಮಗಳು” ಎಂದರೆ ಈ ‘ಬಳಕೆಯ ನಿಯಮಗಳು – Indus Appstore’ ಆಗಿರುತ್ತದೆ ಜೊತೆಗೆ ಉಲ್ಲೇಖದ ಮೂಲಕ ಇಲ್ಲಿ ಸೇರಿಸಲಾದ ಯಾವುದೇ ಹೈಪರ್‌ಲಿಂಕ್‌ಗಳು, ಅನುಸೂಚಿಗಳು, ಅನುಬಂಧಗಳು, ಪ್ರದರ್ಶನಗಳು, ತಿದ್ದುಪಡಿಗಳು ಮತ್ತು/ಅಥವಾ ಪರಿಷ್ಕರಣೆಗಳನ್ನು ಒಳಗೊಂಡಿರುತ್ತದೆ.

b. “Indus Appstore” ಎಂದರೆ ‘Indus Appstore’ ಎಂಬ ಬ್ರಾಂಡ್ ಹೆಸರಿನಲ್ಲಿ Indus ಅಭಿವೃದ್ಧಿಪಡಿಸಿದ, ಅದರ ಮಾಲೀಕತ್ವದ, ಅದು ನಿರ್ವಹಿಸುವ, ವ್ಯವಹರಿಸುವ ಮತ್ತು/ಅಥವಾ ಒದಗಿಸಿದ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ತನ್ನ ಬಳಕೆದಾರರಿಗೆ Indus Appstore ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

c. “Indus Appstore ಸೇವೆಗಳು” ಅಥವಾ “ಸೇವೆಗಳು” ಎಂದರೆ Indus Appstore ನ ಬಳಕೆದಾರರಿಗೆ Indus Appstore ಒದಗಿಸುವ ಸೇವೆಗಳಾಗಿರುತ್ತದೆ. ಇದರಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬ್ರೌಸ್ ಮಾಡುವುದು, ಹುಡುಕಾಟ, ವೀಕ್ಷಣೆ ಮತ್ತು ಡೌನ್‌ಲೋಡ್ (ನವೀಕರಣಗಳನ್ನು ಒಳಗೊಂಡಂತೆ); ಮತ್ತು ಕೆಲವು ವಿಷಯಗಳ ಪ್ರದರ್ಶನ ಸೇರಿರುತ್ತವೆ, ಆದರೆ ಇವುಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ.

d. “ಅನ್ವಯವಾಗುವ ಕಾನೂನು” ಎಂದರೆ ಭಾರತದಲ್ಲಿ ಅನ್ವಯವಾಗುವ ಯಾವುದೇ ಕೇಂದ್ರ, ರಾಷ್ಟ್ರೀಯ, ರಾಜ್ಯ ಅಥವಾ ಸ್ಥಳೀಯ ಸರ್ಕಾರಿ ಪ್ರಾಧಿಕಾರದ ಯಾವುದೇ ಕಾನೂನು, ಶಾಸನ, ನಿಯಮ, ನಿಯಂತ್ರಣ, ಆದೇಶ, ಸುತ್ತೋಲೆ, ತೀರ್ಪು, ನಿರ್ದೇಶನ, ನಿರ್ಣಯ ಅಥವಾ ಇತರ ರೀತಿಯ ಆದೇಶವಾಗಿರುತ್ತದೆ.

e. “ವಿಷಯ” ಎಂದರೆ ಆಡಿಯೋ, ಆಡಿಯೋ-ದೃಶ್ಯ/ವಿಡಿಯೋ, ಧ್ವನಿಗಳು, ಗ್ರಾಫಿಕ್ಸ್, ಚಿತ್ರಗಳು, ಪಠ್ಯ, ವೆಬ್ ಲಿಂಕ್‌ಗಳು/ಹೈಪರ್‌ಲಿಂಕ್‌ಗಳು, ಮಾರ್ಕೆಟಿಂಗ್ ಸಾಮಗ್ರಿ/ಥರ್ಡ್ ಪಾರ್ಟಿ ಜಾಹೀರಾತುಗಳನ್ನು ಒಳಗೊಂಡಂತೆ ಆದರೆ ಅವುಗಳಿಗೆ ಮಾತ್ರ ಸೀಮಿತವಾಗಿರದ ಯಾವುದೇ ವಿಷಯ.

f. “ಡೆವಲಪರ್” ಎಂದರೆ ಮೊಬೈಲ್ ಆ್ಯಪ್‌ ಅನ್ನು ಅಭಿವೃದ್ಧಿಪಡಿಸುವ, ಹೊಂದಿರುವ ಮತ್ತು/ಅಥವಾ ನಿರ್ವಹಿಸುವ ವ್ಯಕ್ತಿ (ಒಬ್ಬ ವ್ಯಕ್ತಿಯಾಗಲಿ ಅಥವಾ ಘಟಕವಾಗಲಿ).

g. “ಸಾಧನ(ಗಳು)” ಎಂದರೆ ಮೊಬೈಲ್ ಫೋನ್, ಟ್ಯಾಬ್ಲೆಟ್ ಸೇರಿದಂತೆ ಆದರೆ ಅವುಗಳಿಗೆ ಮಾತ್ರ ಸೀಮಿತವಾಗಿರದೆ, Indus Appstoreಗೆ ಹೊಂದಿಕೆಯಾಗುವ ಯಾವುದೇ ಆಂಡ್ರಾಯ್ಡ್ ಆಧಾರಿತ ಸಾಧನ.

h. “ಕೈಮೀರಿದ ಘಟನೆಗಳು” ಎಂದರೆ ಭೂಕಂಪ, ಸಾಂಕ್ರಾಮಿಕ, ಸ್ಫೋಟ, ಅಪಘಾತ, ಮನುಷ್ಯರ ಕೈ ಮೀರಿದ ಘಟನೆಗಳು, ಯುದ್ಧ, ಇತರ ಹಿಂಸೆ, ಅನ್ವಯವಾಗುವ ಕಾನೂನಿನಲ್ಲಿ ಬದಲಾವಣೆ, ಯಾವುದೇ ಸರ್ಕಾರಿ ಅಥವಾ ನಿಯಂತ್ರಕ ಪ್ರಾಧಿಕಾರದ ಬೇಡಿಕೆ ಅಥವಾ ಅವಶ್ಯಕತೆಯನ್ನು ಒಳಗೊಂಡಿರುವ ಆದರೆ ಇವುಗಳಿಗೆ ಮಾತ್ರ ಸೀಮಿತವಾಗಿರದ, ಪಾರ್ಟಿಯ ಸೂಕ್ತ ನಿಯಂತ್ರಣದ ಹೊರಗಿನ ಘಟನೆಯಾಗಿರುತ್ತದೆ.

i. “ಬೌದ್ಧಿಕ ಆಸ್ತಿ ಹಕ್ಕು” ಎಂದರೆ ಪ್ರಪಂಚದಾದ್ಯಂತದ ಇರುವ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳು. ಇದರಲ್ಲಿ ಯಾವುದೇ ಪೇಟೆಂಟ್, ವಿನ್ಯಾಸ, ಹಕ್ಕುಸ್ವಾಮ್ಯ, ಡೇಟಾಬೇಸ್, ಪ್ರಚಾರ ಹಕ್ಕುಗಳು, ಟ್ರೇಡ್‌ಮಾರ್ಕ್, ವ್ಯಾಪಾರ ರಹಸ್ಯಗಳು ಅಥವಾ ವ್ಯಾಪಾರ ಹೆಸರು (ನೋಂದಾಯಿತವಾಗಿರಲಿ ಅಥವಾ ಇಲ್ಲದಿರಲಿ) ಸೇರಿರುತ್ತವೆ, ಆದರೆ ಅವುಗಳಿಗೆ ಮಾತ್ರ ಸೀಮಿತವಾಗಿಲ್ಲ.

j. “ಮೊಬೈಲ್ ಆ್ಯಪ್‌(ಗಳು)” ಎಂದರೆ ಸಾಧನ(ಗಳನ್ನು) ಬಳಸಿಕೊಂಡು ಅದರ ಅಂತಿಮ ಬಳಕೆದಾರರಿಗೆ ಉತ್ಪನ್ನಗಳನ್ನು ಒದಗಿಸುವ ಉದ್ದೇಶಕ್ಕಾಗಿ ಪಬ್ಲಿಷರ್‌ಗಳ ಒಡೆತನದಲ್ಲಿರುವ, ಅವರು ಅಭಿವೃದ್ಧಿಪಡಿಸಿದ, ನಿರ್ವಹಿಸುವ, ವ್ಯವಹರಿಸುವ, ಪ್ರಕಟಿಸಿದ ಮತ್ತು/ಅಥವಾ ವಿತರಿಸಿದ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಅಪ್ಲಿಕೇಶನ್ ಆಗಿರುತ್ತದೆ (.apk/.aab /.obb ಫೈಲ್ ಸೇರಿದಂತೆ, ಆದರೆ ಅವುಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ).

k. “ಉತ್ಪನ್ನಗಳು” ಎಂದರೆ Indus Appstore ಮೂಲಕ ಲಭ್ಯವಾಗುವಂತೆ ಮೊಬೈಲ್ ಆ್ಯಪ್‌(ಗಳ) ಮೂಲಕ ಡೆವಲಪರ್ ಒದಗಿಸುವ ಯಾವುದೇ ಉತ್ಪನ್ನಗಳು ಅಥವಾ ಸೇವೆಗಳಾಗಿರುತ್ತದೆ (ಸಂದರ್ಭಕ್ಕೆ ಅನುಸಾರವಾಗಿ).

l. “ಪಬ್ಲಿಷರ್” ಎಂದರೆ Indus Appstore ಮೂಲಕ/ಅದರಲ್ಲಿ ಲಭ್ಯವಾಗುವಂತೆ ಮಾಡಲಾದ ಡೆವಲಪರ್‌ಗಳು, ಜಾಹೀರಾತುದಾರರು ಮತ್ತು/ಅಥವಾ ಥರ್ಡ್ ಪಾರ್ಟಿ ಮೊಬೈಲ್ ಆ್ಯಪ್‌(ಗಳು) ಮತ್ತು/ಅಥವಾ ಸಂದರ್ಭಾನುಸಾರವಾಗಿ ವಿಷಯ ಕೂಡ ಆಗಿರಬಹುದು;

m. “ನೀವು”, “ನಿಮ್ಮ”, “ನೀವೇ” ಎಂದರೆ Indus Appstore ಅಥವಾ Indus Appstore ಸೇವೆಗಳನ್ನು ಪ್ರವೇಶಿಸುವ ಅಥವಾ ಬಳಸುವ ಯಾವುದೇ ವ್ಯಕ್ತಿಯಾಗಿರುತ್ತಾರೆ.

C. ಅರ್ಹತೆ:

Indus Appstore ಅನ್ನು ಪ್ರವೇಶಿಸುವ ಮತ್ತು/ಅಥವಾ ಬಳಸುವ ಮೂಲಕ, ನೀವು ಇದನ್ನು ಪ್ರತಿನಿಧಿಸುತ್ತೀರಿ ಮತ್ತು ಖಾತರಿಪಡಿಸುತ್ತೀರಿ:

a. ನೀವು ಕರಾರು / ಕಾನೂನುಬದ್ಧ ಒಪ್ಪಂದವನ್ನು ಮಾಡಿಕೊಳ್ಳಲು ಸಮರ್ಥರಾಗಿದ್ದೀರಿ. ಇದಲ್ಲದೆ, ನೀವು ಹದಿನೆಂಟು (18) ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದೀರಿ ಅಥವಾ ನೀವು ಅಪ್ರಾಪ್ತ ವಯಸ್ಕರಾಗಿದ್ದರೆ, ನಿಮ್ಮ ಪೋಷಕರು ಅಥವಾ ಕಾನೂನುಬದ್ಧ ಪೋಷಕರು ನಿಯಮಗಳು ಮತ್ತು ಗೌಪ್ಯತಾ ನೀತಿಯನ್ನು ಓದಿ ಅಂಗೀಕರಿಸಿರುತ್ತಾರೆ ಎಂದು ಖಚಿತಪಡಿಸಿಕೊಂಡಿರುತ್ತೀರಿ;

b. ನೀವು Indus ಗೆ ಒದಗಿಸುವ ಮೊಬೈಲ್ ಸಂಖ್ಯೆ ಸೇರಿದಂತೆ ಆದರೆ ಅದಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲಾ ಡೇಟಾ ಮತ್ತು ಮಾಹಿತಿಯು ಎಲ್ಲಾ ರೀತಿಯಲ್ಲೂ ನಿಖರವಾಗಿದೆ ಎಂದು ನೀವು ದೃಢೀಕರಿಸುತ್ತೀರಿ ಮತ್ತು ಖಾತರಿಪಡಿಸುತ್ತೀರಿ;

c. ಭಾರತದ ಕಾನೂನುಗಳು ಅಥವಾ ನೀವು ಪ್ರಸ್ತುತ ಇರುವ ನಿರ್ದಿಷ್ಟ ನ್ಯಾಯವ್ಯಾಪ್ತಿಯ ಅಡಿಯಲ್ಲಿ Indus Appstore ನ ಸೇವೆಗಳನ್ನು ಪ್ರವೇಶಿಸಲು ಅಥವಾ ಬಳಸಲು ನಿಮ್ಮನ್ನು ನಿರ್ಬಂಧಿಸಿರಬಾರದು ಅಥವಾ ಕಾನೂನುಬದ್ಧವಾಗಿ ನಿಷೇಧಿಸಿರಬಾರದು; ಮತ್ತು

d. ನೀವು ಯಾವುದೇ ವ್ಯಕ್ತಿ ಅಥವಾ ಘಟಕದ ರೀತಿ ಸೋಗು ಹಾಕಬಾರದು, ಅಥವಾ ನಿಮ್ಮ ವಯಸ್ಸನ್ನು ತಪ್ಪಾಗಿ ನೀಡಬಾರದು ಅಥವಾ ಯಾವುದೇ ವ್ಯಕ್ತಿ ಅಥವಾ ಘಟಕದೊಂದಿಗಿನ ಸಂಬಂಧವನ್ನು ತಪ್ಪಾಗಿ ನಿರೂಪಿಸಬಾರದು.

D. INDUS APPSTORE ಗೆ ಪ್ರವೇಶ:

Indus Appstore ಸೇವೆಗಳನ್ನು ಪಡೆಯುವ ಮೊದಲು, ನಿಮ್ಮ ಮೊಬೈಲ್ ಸಂಖ್ಯೆ ಮತ್ತು/ಅಥವಾ Indus ಗೆ ಕಾಲಕಾಲಕ್ಕೆ ಅಗತ್ಯವಿರುವ ಯಾವುದೇ ಇತರ ರುಜುವಾತುಗಳು/ಪರಿಶೀಲನೆಗಳನ್ನು ಬಳಸಿಕೊಂಡು ನೀವು ಬಳಕೆದಾರ ಖಾತೆಯನ್ನು ರಚಿಸಬೇಕಾಗುತ್ತದೆ. Indus Appstore ನಿಮಗೆ ಮೊಬೈಲ್ ಆ್ಯಪ್‌‌ಗಳನ್ನು ಹುಡುಕಲು ಮತ್ತು ಡೌನ್‌ಲೋಡ್ ಮಾಡಲು ಮತ್ತು ಈ ಸಾಧನ(ಗಳ) ಮೂಲಕ ವಿಷಯವನ್ನು ವೀಕ್ಷಿಸಲು/ಬಳಸಲು ಅನುವು ಮಾಡಿಕೊಡುತ್ತದೆ. Indus Appstore ಕಾರ್ಯನಿರ್ವಹಿಸಲು ಮತ್ತು Indus Appstore ಸೇವೆಗಳನ್ನು ಒದಗಿಸಲು, ನೀವು ಕೆಲವು ಅನುಮತಿಗಳನ್ನು ಒದಗಿಸಬೇಕಾಗಬಹುದು ಮತ್ತು ಅದಕ್ಕಾಗಿ, ನೀವು ಪ್ರಾಂಪ್ಟ್‌ಗಳು/ಅಧಿಸೂಚನೆಗಳನ್ನು ಸ್ವೀಕರಿಸುತ್ತೀರಿ.

a. Indus Appstore ಸೇವೆಗಳ ನಿಮ್ಮ ಬಳಕೆಗೆ ಸಂಬಂಧಿಸಿದಂತೆ, ನೀವು ಈ ಕೆಳಗಿನವುಗಳನ್ನು ಒಪ್ಪುತ್ತೀರಿ:

ನೀವು Indus Appstore ಸೇವೆಗಳನ್ನು ಈ ಮುಂದಿನ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು, (i) ಅನ್ವಯವಾಗುವ ಕಾನೂನಿನಿಂದ ಅನುಮತಿಸಲಾಗಿದ್ದರೆ, (ii) ವೈಯಕ್ತಿಕ ಮತ್ತು ವಾಣಿಜ್ಯೇತರ ಬಳಕೆಗೆ ಮಾತ್ರ ಮತ್ತು; (iii) Indus ನ ಸೇವೆಗಳಿಗೆ ತಡೆಯೊಡ್ಡುವ ಅಥವಾ ಅಡ್ಡಿಪಡಿಸುವ ಯಾವುದೇ ಚಟುವಟಿಕೆಯಲ್ಲಿ ತೊಡಗಿಲ್ಲವಾದರೆ.

b. ನಿಮ್ಮ ಬಳಕೆದಾರ ಲಾಗಿನ್‌ನ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನಿಮ್ಮದಾಗಿದೆ. ನೀವು ನಿಮ್ಮ ಬಳಕೆದಾರ ಲಾಗಿನ್ ಮಾಹಿತಿಯನ್ನು ಬೇರೆಯವರಿಗೆ ಬಹಿರಂಗಪಡಿಸಬಾರದು, ಬೇರೆಯವರು ನಿಮ್ಮ ಬಳಕೆದಾರ ಲಾಗಿನ್ ಅನ್ನು ಬಳಸಲು ಅನುಮತಿಸಬಾರದು ಅಥವಾ ನೀವು ಬೇರೆಯವರ ಬಳಕೆದಾರ ಲಾಗಿನ್ ಅನ್ನು ಬಳಸಬಾರದು.

c. ನೀವು ಈ ಸಂದರ್ಭಗಳಲ್ಲಿ Indus Appstore ಸೇವೆಗಳನ್ನು ಬಳಸಬಾರದು:

(i) ಯಾವುದೇ ವ್ಯಕ್ತಿಯ ಬೌದ್ಧಿಕ ಆಸ್ತಿ ಹಕ್ಕುಗಳು ಅಥವಾ ವ್ಯಕ್ತಿತ್ವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿದ್ದರೆ ಅಥವಾ ಯಾವುದೇ ರೀತಿಯಲ್ಲಿ ಯಾವುದೇ ತಪ್ಪು ಮಾಹಿತಿಯನ್ನು ಹರಡುವಂತಿದ್ದರೆ;

(ii) ಅಪ್ರಾಪ್ತ ವಯಸ್ಕನನ್ನು ಶೋಷಿಸಲು ಅಥವಾ ಅಪಾಯಕ್ಕೆ ತಳ್ಳುವಂತಿದ್ದರೆ;

(iii) ಯಾವುದೇ ಮೊಬೈಲ್ ಆ್ಯಪ್‌ಗಳು ಅಥವಾ ವಿಷಯವನ್ನು ಯಾವುದೇ ಥರ್ಡ್ ಪಾರ್ಟಿಗೆ ಮಾರಾಟ ಮಾಡಲು, ರವಾನಿಸಲು, ಸಂವಹನ ಮಾಡಲು, ಮಾರ್ಪಡಿಸಲು, ಉಪಪರವಾನಗಿ ನೀಡಲು, ವರ್ಗಾಯಿಸಲು, ನಿಯೋಜಿಸಲು, ಬಾಡಿಗೆಗೆ ನೀಡಲು, ಗುತ್ತಿಗೆ ನೀಡಲು, ಮರುಹಂಚಿಕೆ ಮಾಡಲು, ಪ್ರಸಾರ ಮಾಡಲು;

(iv) Indus Appstore ನ ಅಥವಾ ಅದು ಒದಗಿಸಿದ ಯಾವುದೇ ವೈಶಿಷ್ಟ್ಯಗಳು, ಸೇವೆಗಳು ಅಥವಾ ಭದ್ರತಾ ವೈಶಿಷ್ಟ್ಯಗಳನ್ನು ಮೀರಿ ನುಸುಳುವ, ನಿಷ್ಕ್ರಿಯಗೊಳಿಸುವ ಅಥವಾ ಭಂಗಗೊಳಿಸುವಂತಹ ಕೆಲಸಗಳನ್ನು ಮಾಡುವುದು, ಮಾಡುವುದಕ್ಕೆ ಪ್ರಯತ್ನಿಸುವುದು ಅಥವಾ ಇತರರು ಅದನ್ನು ಮಾಡುವುದಕ್ಕೆ ಸಹಾಯ ಮಾಡುವುದು, ಅಧಿಕಾರ ನೀಡುವುದು ಅಥವಾ ಪ್ರೋತ್ಸಾಹಿಸುವುದು;

(v) ಕಾನೂನುಬಾಹಿರವಾದ, ದುರಾಚಾರದ, ಅನೈತಿಕವಾದ ಯಾವುದೇ ಉದ್ದೇಶಕ್ಕಾಗಿ;

(vi) ಭಯೋತ್ಪಾದನೆಯನ್ನು ನಡೆಸುವುದು, ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವುದು;

(vii) ಮಾನವ ಹಕ್ಕುಗಳನ್ನು ಉಲ್ಲಂಘಿಸುವುದು ಅಥವಾ ಯಾವುದೇ ನೇರ ಅಥವಾ ಪರೋಕ್ಷ ವೈಯಕ್ತಿಕ ಥಳಿಸುವುದು ಅಥವಾ ಸಾವಿಗೆ ಕಾರಣವಾಗುವುದು; ಮತ್ತು

(viii) ಅಸಭ್ಯ ಅಶ್ಲೀಲ, ಶಿಶುಕಾಮಿ, ದೈಹಿಕ ಗೌಪ್ಯತೆ ಸೇರಿದಂತೆ ಇನ್ನೊಬ್ಬರ ಗೌಪ್ಯತೆಗೆ ಧಕ್ಕೆ ತರುವ, ಲಿಂಗದ ಆಧಾರದ ಮೇಲೆ ಅವಮಾನಿಸುವುದು ಅಥವಾ ಕಿರುಕುಳ ನೀಡುವುದು, ಮನುಕುಲ ಅಥವಾ ಜನಾಂಗೀಯವಾಗಿ ಆಕ್ಷೇಪಾರ್ಹ, ಹಣ ವರ್ಗಾವಣೆ ಅಥವಾ ಜೂಜಾಟಕ್ಕೆ ಸಂಬಂಧಿಸಿದ ಅಥವಾ ಪ್ರೋತ್ಸಾಹಿಸುವ ಅಥವಾ ಹಿಂಸೆಯನ್ನು ಪ್ರಚೋದಿಸುವ ಉದ್ದೇಶದಿಂದ ಧರ್ಮ ಅಥವಾ ಜಾತಿಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಯಾವುದೇ ಚಟುವಟಿಕೆ.

d. ಯಾವುದೇ ನಮ್ಮ ಕೈಮೀರಿದ ಘಟನೆಯಿಂದ Indus Appstore ಅಥವಾ ಅದರ ಯಾವುದೇ ಭಾಗ ಲಭ್ಯವಿಲ್ಲದಿದ್ದಲ್ಲಿ, ಆಗಲೂ Indus ನಿಮಗೆ ಯಾವುದೇ ಹೊಣೆಗಾರಿಕೆಯನ್ನು ಹೊರುವುದಿಲ್ಲ ಎಂದು ನೀವು ಒಪ್ಪುತ್ತೀರಿ.

e. ನೀವು Indus Appstore ಅನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮಾರ್ಪಡಿಸಬಾರದು, ರಿವರ್ಸ್ ಎಂಜಿನಿಯರ್ ಮಾಡಬಾರದು, ಭಿನ್ನಗೊಳಿಸಬಾರದು ಅಥವಾ ವಿಭಜಿಸಬಾರದು, ಅಥವಾ Indus Appstore ನಲ್ಲಿರುವ ಯಾವುದೇ ಹಕ್ಕುಗಳಿಂದ ಯಾವುದೇ ವ್ಯುತ್ಪನ್ನ ಕೃತಿಗಳನ್ನು ರಚಿಸಬಾರದು ಅಥವಾ ಅದಕ್ಕೆ ಉಪ-ಪರವಾನಗಿ ನೀಡಬಾರದು.

f. ನೀವು ಮೊಬೈಲ್ ಆ್ಯಪ್‌ ಬಳಸುವುದು ಅಥವಾ ಮೊಬೈಲ್ ಆ್ಯಪ್‌ ಅಥವಾ ನಿಮ್ಮ ಸಾಧನಗಳಲ್ಲಿನ ಯಾವುದೇ ವಿಷಯ ಅಥವಾ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ Indus ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ಹೊಂದಿಲ್ಲ ಎಂದು ನೀವು ಒಪ್ಪುತ್ತೀರಿ. ನಿಮ್ಮ ಮತ್ತು ಪಬ್ಲಿಷರ್ ನಡುವಿನ ಒಪ್ಪಂದಕ್ಕೆ Indus ಒಂದು ಪಾರ್ಟಿಯಾಗಿರುವುದಿಲ್ಲ ಮತ್ತು ವಾರಂಟಿಗಳು ಮತ್ತು/ಅಥವಾ ಖಾತರಿಗಳನ್ನು ಒಳಗೊಂಡಂತೆ, ಆದರೆ ಇಷ್ಟಕ್ಕೇ ಸೀಮಿತವಾಗಿರದೆ ಒಪ್ಪಂದದ ಅಡಿಯಲ್ಲಿರುವ ಎಲ್ಲಾ ಬಾಧ್ಯತೆಗಳಿಗೆ ಪಬ್ಲಿಷರ್ ಮಾತ್ರ ಜವಾಬ್ದಾರರಾಗಿರುತ್ತಾರೆ.

g. Indus ನಿಮ್ಮ ವೈಯಕ್ತಿಕ ಡೇಟಾವನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ವಿವರಿಸುವ Indus ‌ನ ಗೌಪ್ಯತಾ ನೀತಿಗೆ ನೀವು ಬದ್ಧರಾಗಿರಲು ಒಪ್ಪುತ್ತೀರಿ.

E. INDUS APPSTORE ಬಳಕೆಯ ಷರತ್ತುಗಳು ಮತ್ತು ನಿರ್ಬಂಧಗಳು:

a. Indus Appstore ಸೇವೆಗಳಿಗೆ ಅನುಗುಣವಾಗಿ, Indus Appstore ನಲ್ಲಿ ಮೊಬೈಲ್ ಆ್ಯಪ್‌ಗಳು ಮತ್ತು/ಅಥವಾ ವಿಷಯವನ್ನು ಹುಡುಕಲು ಮತ್ತು ಪ್ರವೇಶಿಸಲು Indus ನಿಮಗೆ ಅನುವು ಮಾಡಿಕೊಡುತ್ತದೆ.

b. ಮೊಬೈಲ್ ಅಪ್ಲಿಕೇಶನ್‌ಗಳ ವಿಷಯಗಳ ಬಗ್ಗೆ Indus ಗೆ ನೈಜ ಅಥವಾ ನಿರ್ದಿಷ್ಟ ಅರಿವಿರುವುದಿಲ್ಲ ಎಂದು ನೀವು ಈ ಮೂಲಕ ಸಮ್ಮತಿಸುತ್ತೀರಿ ಮತ್ತು ಅಂಗೀಕರಿಸುತ್ತೀರಿ. ಆದಾಗ್ಯೂ, ಅಂತಹ ಮೊಬೈಲ್ ಆ್ಯಪ್‌ಗಳು ಅಥವಾ ಅದರಲ್ಲಿರುವ ವಿಷಯವು ಈ ನಿಯಮಗಳು ಅಥವಾ ಯಾವುದೇ ಅನ್ವಯವಾಗುವ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು Indus ತನ್ನ ಸ್ವಂತ ವಿವೇಚನೆಯಿಂದ ನಿರ್ಧರಿಸಿದರೆ Indus ತನ್ನ ವಿವೇಚನೆಯ ಪ್ರಕಾರ ಮತ್ತು ಅನ್ವಯವಾಗುವ ಕಾನೂನಿಗೆ ಅನುಸಾರವಾಗಿ ಯಾವುದೇ ಮೊಬೈಲ್ ಆ್ಯಪ್‌ಗಳನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು Indus Appstore ನಿಂದ ಯಾವುದೇ ಮೊಬೈಲ್ ಆ್ಯಪ್‌ಗಳನ್ನು ತೆಗೆದುಹಾಕಬಹುದು. ಯಾವುದೇ ಕಾನೂನು ಜಾರಿ ಸಂಸ್ಥೆಗಳು ಅಥವಾ ಇತರ ಸರ್ಕಾರಿ ಸಂಸ್ಥೆಗಳಿಂದ ಯಾವುದೇ ತೆಗೆದುಹಾಕುವ ವಿನಂತಿಗಳನ್ನು ಸ್ವೀಕರಿಸಿದ ನಂತರ Indus Appstore ನಿಂದ ಯಾವುದೇ ಮೊಬೈಲ್ ಆ್ಯಪ್‌ಗಳನ್ನು Indus ತೆಗೆದುಹಾಕಬಹುದು.

c. ನಿಮ್ಮ ಬಳಕೆದಾರ ಲಾಗಿನ್‌ನಲ್ಲಿ ಅಥವಾ ಅದರ ಮೂಲಕ ನಡೆಯುವ ಎಲ್ಲಾ ಚಟುವಟಿಕೆಗಳಿಗೆ ನೀವೇ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ, ಮತ್ತು ನಿಮ್ಮ ಬಳಕೆದಾರ ಲಾಗಿನ್‌ನ ಯಾವುದೇ ಅನಧಿಕೃತ ಬಳಕೆ ಅಥವಾ ಯಾವುದೇ ಭದ್ರತಾ ಉಲ್ಲಂಘನೆಯ ಬಗ್ಗೆ Indus ಗೆ ತಕ್ಷಣ ತಿಳಿಸಲು ನೀವು ಸಮ್ಮಿತಿಸುತ್ತೀರಿ.

d. ಪಬ್ಲಿಷರ್‌ Indus ಪಾಲಿಸಿಗಳ ಉಲ್ಲಂಘನೆ ಮಾಡಿರುವುದು, ಪಬ್ಲಿಷರ್‌ Indus Appstore ನಲ್ಲಿ ವಿಷಯ/ಮೊಬೈಲ್ ಆ್ಯಪ್‌ ಅನ್ನು ಸ್ಥಗಿತಗೊಳಿಸಿದ್ದರೆ, ಅಥವಾ ನೀವು/ಪಬ್ಲಿಷರ್‌ ಅನ್ವಯಿಸುವ ಕಾನೂನನ್ನು ಉಲ್ಲಂಘಿಸಿರುವುದು ಸೇರಿದಂತೆ ಆದರೆ ಅಷ್ಟಕ್ಕೆ ಮಾತ್ರ ಸೀಮಿತವಾಗಿರದೆ, ಕೆಲವು ಸಂದರ್ಭಗಳಲ್ಲಿ Indus ನಿಮಗೆ ಯಾವುದೇ ವಿಷಯ ಮತ್ತು/ಅಥವಾ ಮೊಬೈಲ್ ಆ್ಯಪ್‌ಗೆ ಪ್ರವೇಶ ಒದಗಿಸುವುದನ್ನು ನಿಲ್ಲಿಸಬಹುದು.  Indus Appstore ನಿಂದ ಮೊಬೈಲ್ ಆ್ಯಪ್‌ ಅನ್ನು ತೆಗೆದುಹಾಕಿದರೆ, ಮೊಬೈಲ್ ಆ್ಯಪ್‌ ತೆಗೆದುಹಾಕಿದ ನಂತರ ನೀವು Indus Appstore ಮೂಲಕ ಯಾವುದೇ ನವೀಕರಣಗಳು ಅಥವಾ ಅಪ್‌ಗ್ರೇಡ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತೀರಿ.

e. Indus Appstore ಮೊಬೈಲ್ ಅಪ್ಲಿಕೇಶನ್‌ಗಳನ್ನು ಹೋಸ್ಟ್ ಮಾಡುತ್ತದೆ, ಅವುಗಳು ಉಚಿತವಾದ ವಿಷಯವನ್ನು ಒಳಗೊಂಡಿರಬಹುದು ಮತ್ತು ಚಂದಾದಾರಿಕೆಗೆ ಒಳಪಟ್ಟ ವಿಷಯವಾಗಿರಬಹುದು ಅಥವಾ ಅಪ್ಲಿಕೇಶನ್ ಖರೀದಿಯಲ್ಲಿ ನೀವು ಪಬ್ಲಿಷರ್‌ಗೆ ಪಾವತಿಸಬೇಕಾದ ವೆಚ್ಚದಲ್ಲಿ ಬಂದ ವಿಷಯವನ್ನು ಒಳಗೊಂಡಿರಬಹುದು. ವಿಷಯದ ಬೆಲೆ ನಿಗದಿಯು ಪಬ್ಲಿಷರ್‌ಗಳ ವಿವೇಚನೆ ಮತ್ತು ಅವರು ನಿರ್ಧರಿಸಿದ ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ ಮತ್ತು Indus Appstore/Indus ‌ಗೆ ಇದರ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ. ದರದಲ್ಲಿ ಬದಲಾವಣೆಗಳು, ಚಂದಾದಾರಿಕೆ ನಿಯಮಗಳಿಗಾಗಿ, ನೀವು ಆಯ್ಕೆ ಮಾಡಿದ ಅಥವಾ ಖರೀದಿಸಿದ ವಿಷಯದ ಪೂರೈಕೆದಾರರಾದ ಆಯಾ ಪಬ್ಲಿಷರ್‌ ಅನ್ನು ನೀವು ಸಂಪರ್ಕಿಸಬೇಕು. ನೀವು ವಿಷಯವನ್ನು ಖರೀದಿಸಿದಾಗ, ನೀವು ಆಯಾ ಪಬ್ಲಿಷರ್‌ ಜೊತೆ ಪ್ರತ್ಯೇಕ ಒಪ್ಪಂದವನ್ನು ಮಾಡಿಕೊಳ್ಳುತ್ತೀರಿ. ಯಾವುದೇ ಪಾವತಿ ಸಂಬಂಧಿತ ಸಮಸ್ಯೆಯ ಸಂದರ್ಭದಲ್ಲಿ, ನೀವು ಆಯಾ ಪಬ್ಲಿಷರ್‌, ನಿಮ್ಮ ಬ್ಯಾಂಕ್ ಅಥವಾ ಪಾವತಿ ಸೇವಾ ಪೂರೈಕೆದಾರರನ್ನು ಸಂಪರ್ಕಿಸಬೇಕು.

f. ನಿಮಗೆ ಸೂಚನೆ ನೀಡಿ ಅಥವಾ ನೀಡದೆಯೇ ಯಾವುದೇ ಸಮಯದಲ್ಲಿ Indus Appstore ಅನ್ನು ಮಾರ್ಪಡಿಸುವ ಹಕ್ಕನ್ನು Indus ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿದೆ. Indus Appstore ಎಲ್ಲಾ ಸಮಯದಲ್ಲೂ ಲಭ್ಯವಿಲ್ಲದಿರಬಹುದು, ಉದಾಹರಣೆಗೆ ನಿರ್ವಹಣಾ ಕಾರಣಕ್ಕಾಗಿ ಸ್ಥಗಿತದ ಸಮಯದಲ್ಲಿ (ಇದು ಯೋಜಿಸಿರಬಹುದು ಅಥವಾ ಯೋಜಿಸದೇ ಇರಬಹುದು). Indus ತನ್ನ ಸ್ವಂತ ವಿವೇಚನೆಯಿಂದ, ಯಾವುದೇ ಸೂಚನೆ ಇಲ್ಲದೆ ಯಾವುದೇ ಸಮಯದಲ್ಲಿ Indus Appstore ಅಥವಾ ಅದರಿಂದ ಒದಗಿಸಲಾದ ಸೇವೆಗಳನ್ನು (ಅಥವಾ ಅದರ ಯಾವುದೇ ಭಾಗ) ಅಮಾನತುಗೊಳಿಸಲು ಅಥವಾ ಕೊನೆಗೊಳಿಸಲು ನಿರ್ಧರಿಸಬಹುದು.

g. Indus ಪಬ್ಲಿಷರ್‌ ತಮ್ಮ ಮೊಬೈಲ್ ಆ್ಯಪ್‌ಗಳ ವಿವರಣೆಗೆ ಸಂಬಂಧಿಸಿದಂತೆ ನಿಖರವಾದ ಮಾಹಿತಿಯನ್ನು ಒದಗಿಸಬೇಕೆಂದು ಬಯಸುತ್ತದೆಯಾದರೂ, ಪಬ್ಲಿಷರ್‌ ಒದಗಿಸಿದ ಮೊಬೈಲ್ ಆ್ಯಪ್‌(ಗಳು) ಅಥವಾ ಇತರ ವಿವರಗಳು/ವಿಷಯ/ಉತ್ಪನ್ನ(ಗಳು) ನಿಖರ, ಸಂಪೂರ್ಣ, ವಿಶ್ವಾಸಾರ್ಹ, ಪ್ರಸ್ತುತ ಅಥವಾ ದೋಷ-ಮುಕ್ತವಾಗಿದೆ ಎಂದು Indus ಖಾತರಿಪಡಿಸುವುದಿಲ್ಲ.

h. ನೀವು Indus Appstore ನಲ್ಲಿ ಮೊಬೈಲ್ ಆ್ಯಪ್‌(ಗಳು) ಮುಂದೆ ‘ಪರಿಶೀಲಿಸಿದ’ ಬ್ಯಾಡ್ಜ್ ಮತ್ತು/ಅಥವಾ ‘ಉನ್ನತ ದರ್ಜೆಯ’ ಬ್ಯಾಡ್ಜ್ ಅನ್ನು ವೀಕ್ಷಿಸಲು ಸಾಧ್ಯವಾಗಬಹುದು. ಪರಿಶೀಲಿಸಿದ ಬ್ಯಾಡ್ಜ್ Indus ಬಳಸುವ ಕೆಲವು ಥರ್ಡ್ ಪಾರ್ಟಿ ಸ್ಕ್ಯಾನಿಂಗ್ ಟೂಲ್‌ಗಳ ವಿರುದ್ಧ ಮೊಬೈಲ್ ಆ್ಯಪ್‌(ಗಳು)ನ ಕಾರ್ಯಕ್ಷಮತೆಯನ್ನು ಆಧರಿಸಿರುತ್ತದೆ. Indus Appstore ಮೂಲಕ ಮೊಬೈಲ್ ಅಪ್ಲಿಕೇಶನ್(ಗಳು) ಬಳಕೆ/ಕಾರ್ಯಕ್ಷಮತೆಯನ್ನು ಆಧರಿಸಿ ಉನ್ನತ ದರದ ಬ್ಯಾಡ್ಜ್ ಅನ್ನು ನೀಡಲಾಗುತ್ತದೆ. ಪರಿಶೀಲಿಸಿದ ಬ್ಯಾಡ್ಜ್ ಮತ್ತು ಉನ್ನತ ದರ್ಜೆಯ ಬ್ಯಾಡ್ಜ್, ಯಾವುದೇ ರೀತಿಯಲ್ಲಿ ಮೊಬೈಲ್ ಆ್ಯಪ್‌(ಗಳ) ವಿಶ್ವಾಸಾರ್ಹತೆ/ಸುರಕ್ಷತೆಯನ್ನು ಸೂಚಿಸುವುದಿಲ್ಲ ಮತ್ತು ಈ ಬ್ಯಾಡ್ಜ್‌ಗಳನ್ನು Indus ಮೊಬೈಲ್ ಆ್ಯಪ್‌ನ ಅನುಮೋದನೆ ಎಂದು ಯಾವುದೇ ರೀತಿಯಲ್ಲಿ ಪರಿಗಣಿಸಬಾರದು. ಅಂತಹ ಮೊಬೈಲ್ ಅಪ್ಲಿಕೇಶನ್(ಗಳ) ಬಳಕೆಯು ಸಂಪೂರ್ಣವಾಗಿ ನಿಮ್ಮ ಸ್ವಂತ ಜವಾಬ್ದಾರಿಯಾಗಿರುತ್ತದೆ. ಅದು ನೀವು ಮತ್ತು ಪಬ್ಲಿಷರ್‌ ನಡುವೆ ಒಪ್ಪಂದವಾಗಿರುವ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ನಡೆಸಬೇಕು.

i. ಸಾಫ್ಟ್‌ವೇರ್ ನವೀಕರಣಗಳು: ಮೊಬೈಲ್ ಆ್ಯಪ್‌ನ ಪಬ್ಲಿಷರ್‌ ಕಾಲಕಾಲಕ್ಕೆ ಆ ಮೊಬೈಲ್ ಆ್ಯಪ್‌ಗೆ ನವೀಕರಣಗಳನ್ನು ಒದಗಿಸಬಹುದು. ಸಾಧನದಲ್ಲಿ ಒದಗಿಸಲಾದ ಅಗತ್ಯ ಅನುಮತಿಗಳಿಗೆ ಒಳಪಟ್ಟು, ನಿಮ್ಮ ಮೊಬೈಲ್ ಅಪ್ಲಿಕೇಶನ್‌ಗಳಿಗೆ ನವೀಕರಣಗಳನ್ನು ಸ್ವಯಂಚಾಲಿತವಾಗಿ ಇನ್ಸ್ಟಾಲ್ ಮಾಡಲು ನೀವು Indus ಗೆ ಈ ಮೂಲಕ ಅಧಿಕಾರ ನೀಡುತ್ತೀರಿ.

F. ವಿಮರ್ಶೆ ಮತ್ತು ರೇಟಿಂಗ್‌ಗಳು:

ನೀವು Indus Appstore ನಲ್ಲಿ ಆ್ಯಕ್ಸೆಸ್ ಮಾಡುವ ಮತ್ತು ಬಳಸುವ ಮೊಬೈಲ್ ಆ್ಯಪ್‌ಗಳಿಗೆ ಸಂಬಂಧಿಸಿದಂತೆ Indus Appstore ನಲ್ಲಿ ರೇಟಿಂಗ್‌ಗಳು ಮತ್ತು ವಿಮರ್ಶೆಗಳನ್ನು ಒದಗಿಸಬಹುದು. Indus Appstore ನಲ್ಲಿ ತೋರಿಸಲಾದ ಮೊಬೈಲ್ ಆ್ಯಪ್‌(ಗಳ) ರೇಟಿಂಗ್‌ಗಳನ್ನು Indus Appstore ಬಳಕೆದಾರರಿಂದ ಪಡೆದ ಸರಾಸರಿ ರೇಟಿಂಗ್‌ಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ವಿಮರ್ಶೆಗಳು ನಿಮ್ಮ ಬಳಕೆದಾರ ಲಾಗಿನ್ ಖಾತೆಗೆ ಲಿಂಕ್ ಮಾಡಲಾದ ವಿವರಗಳನ್ನು ತೋರಿಸುತ್ತವೆ. ವಿಮರ್ಶೆಗಳಿಗಾಗಿ, ಡೆವಲಪರ್‌ಗಳು ನಿಮಗೆ ಸೇರಿದ ಬಳಕೆದಾರರ ಲಾಗಿನ್ ಖಾತೆಯ ವಿವರಗಳು, ಭಾಷೆ, ಸಾಧನ ಮತ್ತು ಸಾಧನದ ಮಾಹಿತಿಯನ್ನು (ಲಾಂಗ್ವೇಜ್, ಮಾಡೆಲ್ ಮತ್ತು OS ವರ್ಷನ್ ನಂತಹವು) ನೋಡಲು ಸಾಧ್ಯವಾಗುತ್ತದೆ. ಡೆವಲಪರ್‌ಗಳು ವಿಮರ್ಶೆಗಳಿಗೂ ಸಹ ಪ್ರತ್ಯುತ್ತರಿಸಬಹುದು ಜೊತೆಗೆ ನಿಮಗೆ ಪ್ರತ್ಯುತ್ತರಿಸಲು ಈ ಮಾಹಿತಿಯನ್ನು ಬಳಸಬಹುದು. ಒಂದುವೇಳೆ ನೀವು ವಿಮರ್ಶೆಯನ್ನು ತಿದ್ದಿ ಬರೆದರೆ, ಆಗ ನೀವು ಆ ವಿಮರ್ಶೆಯನ್ನು ಅಳಿಸದ ಹೊರತು ಇತರ ಬಳಕೆದಾರರು ಮತ್ತು ಡೆವಲಪರ್‌ಗಳು ಈ ಹಿಂದೆ ತಿದ್ದಿ ಬರೆದಿರುವುದೆಲ್ಲವನ್ನು ಈಗಲೂ ನೋಡಬಹುದಾಗಿರುತ್ತದೆ.

ರೇಟಿಂಗ್‌ಗಳು ಮತ್ತು ವಿಮರ್ಶೆಗಳಿಗಾಗಿ Indus ನ ಮಾರ್ಗಸೂಚಿಗಳನ್ನು ಕೆಳಗೆ ನೀಡಲಾಗಿದೆ. ಈ ಮಾರ್ಗಸೂಚಿಗಳನ್ನು ಪಾಲಿಸದ ವಿಮರ್ಶೆಗಳನ್ನು ತೆಗೆದುಹಾಕಲಾಗುತ್ತದೆ, ಜೊತೆಗೆ ಅವುಗಳನ್ನು ಪದೇ ಪದೇ ಉಲ್ಲಂಘಿಸಿದರೆ ಅಥವಾ ತಮ್ಮ ಮಿತಿಯನ್ನು ಮೀರಿದರೆ, ಅಂತಹ ಯಾವುದೇ ವ್ಯಕ್ತಿಯನ್ನು Indus Appstore ನಲ್ಲಿ ತಮ್ಮ ವಿಮರ್ಶೆಗಳನ್ನು ಪೋಸ್ಟ್ ಮಾಡದಂತೆ ಅವರನ್ನು ತಡೆಯಬಹುದು.

a) ಸ್ಪ್ಯಾಮ್ ಮತ್ತು ನಕಲಿ ವಿಮರ್ಶೆಗಳು: ದಯವಿಟ್ಟು ನಿಮ್ಮ ವಿಮರ್ಶೆಗಳು ನೀವು ಪರಿಶೀಲಿಸುತ್ತಿರುವ ಮೊಬೈಲ್ ಆ್ಯಪ್‌(ಗಳ) ಜೊತೆ ನಿಮಗಾದ ಅನುಭವವನ್ನು ಪ್ರತಿಬಿಂಬಿಸುತ್ತವೆಯೇ ಎಂದು ಖಚಿತಪಡಿಸಿಕೊಳ್ಳಿ. ದಯವಿಟ್ಟು ಇಂತಹವುಗಳನ್ನು ಪೋಸ್ಟ್ ಮಾಡದಿರಿ:

(i) ತಪ್ಪಾದ ವಿಮರ್ಶೆಗಳು;

(ii) ಅನೇಕ ಬಾರಿ ಒಂದೇ ವಿಮರ್ಶೆ ಹಾಕುವುದು;

(iii) ಒಂದೇ ವಿಷಯದ ಬಗ್ಗೆ ಹಲವು ಖಾತೆಗಳಿಂದ ವಿಮರ್ಶೆ ಹಾಕುವುದು;

(iv) ಇತರ ಬಳಕೆದಾರರನ್ನು ದಾರಿ ತಪ್ಪಿಸಲು ಅಥವಾ ರೇಟಿಂಗ್ ಅನ್ನು ಮಾರ್ಪಡಿಸುವ ದುರುದ್ದೇಶ ಹೊಂದಿರುವ ವಿಮರ್ಶೆಗಳು; ಮತ್ತು/ಅಥವಾ

(v) ಇತರರ ಪರವಾಗಿ ಹಾಕುವ ವಿಮರ್ಶೆಗಳು.

b) ಸಂಬಂಧಿತ ವಿಮರ್ಶೆಗಳು: ದಯವಿಟ್ಟು ವಿಮರ್ಶೆಗಳು ಪರಿಶೀಲಿಸಲಾಗುತ್ತಿರುವ ಮೊಬೈಲ್ ಆ್ಯಪ್‌(ಗಳು) ಗೆ ಸಂಬಂಧಿಸಿವೆಯೇ ಎಂದು ಖಚಿತಪಡಿಸಿಕೊಳ್ಳಿ.

c) ಪ್ರಚಾರ ವಸ್ತು: ವಿಮರ್ಶೆಗಳು ನೀವು ಪರಿಶೀಲಿಸುತ್ತಿರುವ ಮೊಬೈಲ್ ಆ್ಯಪ್‌(ಗಳ) ವ್ಯಾಪ್ತಿಯ ಹೊರಗಿನ ವಿಷಯವನ್ನು ಪ್ರಚಾರ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.

d) ಆರ್ಥಿಕ ಲಾಭ: ವಿಮರ್ಶೆಗಳು ಪಕ್ಷಪಾತವಾಗಿರುವುದಿಲ್ಲ, ಅಲ್ಲದೆ ಆರ್ಥಿಕ ಲಾಭದಿಂದ ಪ್ರಭಾವಿತವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಈ ನಿಟ್ಟಿನಲ್ಲಿ, ದಯವಿಟ್ಟು ವಿಮರ್ಶೆಗಳನ್ನು ಪೋಸ್ಟ್ ಮಾಡುವುದಕ್ಕಾಗಿ ಯಾವುದೇ ಪ್ರೋತ್ಸಾಹಕ ಧನಗಳನ್ನು ಸ್ವೀಕರಿಸಬೇಡಿ ಅಥವಾ ಯಾರಿಗೂ ನೀಡಬೇಡಿ.

e) ಬೌದ್ಧಿಕ ಆಸ್ತಿ: ಇತರರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುವ ವಿಮರ್ಶೆಗಳನ್ನು ನೀವು ಪೋಸ್ಟ್ ಮಾಡುತ್ತಿಲ್ಲವೆಂದು ಖಚಿತಪಡಿಸಿಕೊಳ್ಳಿ.

f) ಸೂಕ್ಷ್ಮ ಮಾಹಿತಿ: ನಿಮ್ಮ ವೈಯಕ್ತಿಕ ಅಥವಾ ಗೌಪ್ಯ ಮಾಹಿತಿಯನ್ನಾಗಲೀ ಅಥವಾ ಯಾವುದೇ ಬಳಕೆದಾರರ ವೈಯಕ್ತಿಕ ಅಥವಾ ಗೌಪ್ಯ ಮಾಹಿತಿಯನ್ನಾಗಲೀ ನಿಮ್ಮ ವಿಮರ್ಶೆಯ ಭಾಗವಾಗಿ ಪೋಸ್ಟ್ ಮಾಡುತ್ತಿಲ್ಲವೆಂದು ಖಚಿತಪಡಿಸಿಕೊಳ್ಳಿ.

g) ಆಕ್ಷೇಪಾರ್ಹ ಭಾಷೆ: ನಿಮ್ಮ ವಿಮರ್ಶೆಗಳಲ್ಲಿ ಅಶ್ಲೀಲ, ಅಸಭ್ಯ, ಆಕ್ರಮಣಕಾರಿ ಭಾಷೆಯನ್ನು ಬಳಸದಂತೆ ದಯವಿಟ್ಟು ಎಚ್ಚರವಹಿಸಿ.

h) ನೀವು ಪೋಸ್ಟ್ ಮಾಡುವ ವಿಮರ್ಶೆಗಳು ಅನ್ವಯವಾಗುವ ಕಾನೂನುಗಳಿಗೆ ಅನುಸಾರವಾಗಿದ್ದು, ಯಾವುದೇ ಕಾನೂನುಬಾಹಿರ/ಲೈಂಗಿಕ ಅಭಿವ್ಯಕ್ತಿಯ/ದ್ವೇಷಪೂರಿತ ವಿಷಯವನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಿ.

ನೀವು ದುರುಪಯೋಗ ಅಥವಾ ಇತರ ವಿಷಯವಸ್ತುವಿನ ಉಲ್ಲಂಘನೆಗಳನ್ನು ವರದಿ ಮಾಡಲು ಬಯಸಿದರೆ, ದಯವಿಟ್ಟು ಪ್ರತ್ಯೇಕವಾಗಿ ಲಭ್ಯವಿರುವ Indus ನ ದೂರಿನ ಪಾಲಿಸಿಯನ್ನು ನೋಡಿ.

Indus Appstore ಸ್ವಯಂಚಾಲಿತ ವಿಧಾನಗಳ ಮೂಲಕ ಅಥವಾ ಹಸ್ತಚಾಲಿತವಾಗಿ, ಕೆಲವು ಅಥವಾ ಎಲ್ಲಾ ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ಸ್ಕ್ರೀನ್ ಮಾಡಬಹುದು ಮತ್ತು ಮಾಡರೇಟ್ ಮಾಡಬಹುದು ಎಂದು ನೀವು ಸಮ್ಮತಿಸುತ್ತೀರಿ. Indus ‌ ತನ್ನ ಸ್ವಂತ ಅಭಿಪ್ರಾಯದ ಮೇರೆಗೆ ಅನುಚಿತ ಅಥವಾ ಮೊಬೈಲ್ ಆ್ಯಪ್‌ಗೆ ಸಂಬಂಧಿಸದ ಅಥವಾ ಮೊಬೈಲ್ ಆ್ಯಪ್‌ಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸದ ಅಥವಾ Indus ‌ನ ಪಾಲಿಸಿಗಳಿಗೆ ವಿರುದ್ಧವಾಗಿರುವ ಯಾವುದೇ ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ತಿರಸ್ಕರಿಸುವ ಅಥವಾ ತೆಗೆದುಹಾಕುವ ಹಕ್ಕನ್ನು Indus ಕಾಯ್ದಿರಿಸಿಕೊಂಡಿರುತ್ತದೆ. ಈ ವಿಷಯದಲ್ಲಿ Indus ನ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಇದು Indus Appstore ನ ಎಲ್ಲಾ ಬಳಕೆದಾರರ ಮೇಲೆ ಬದ್ಧವಾಗಿರುತ್ತದೆ.

Indus Appstore ನ ಬಳಕೆದಾರರು ಮತ್ತು/ಅಥವಾ Indus ‌ನ ಮಾರ್ಕೆಟ್ ಇಂಟೆಲಿಜೆನ್ಸ್ ಒದಗಿಸಲಾದ ರೇಟಿಂಗ್‌ಗಳ ಒಟ್ಟು ಸಂಖ್ಯೆಯ ಮೇಲೆ ಮೊಬೈಲ್ ಆ್ಯಪ್‌ ರೇಟಿಂಗ್‌ಗಳನ್ನು Indus Appstore ತೆಗೆದುಕೊಳ್ಳುತ್ತದೆ. ಆದ್ದರಿಂದ, Indus Appstore ಅವು ನಿಖರವಾಗಿವೆ ಮತ್ತು/ಅಥವಾ ಮೊಬೈಲ್ ಆ್ಯಪ್‌ನ ಕಾರ್ಯಕ್ಷಮತೆ/ಸೂಕ್ತತೆಯನ್ನು ಸೂಚಿಸುತ್ತವೆ ಎಂದು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡಿರುತ್ತೀರಿ. 

G. ಹಕ್ಕು ನಿರಾಕರಣೆಗಳು

Indus Appstore ಸೇವೆಗಳನ್ನು “ಅದು ಇರುವಂತೆಯೇ”, “ಎಲ್ಲಿ ಇದೆಯೋ ಹಾಗೆಯೇ” ಮತ್ತು “ಲಭ್ಯವಿರುವಂತೆ” ಆಧಾರದ ಮೇಲೆ ಮತ್ತು ಯಾವುದೇ ರೀತಿಯ ಖಾತರಿಗಳಿಲ್ಲದೆ ಒದಗಿಸಲಾಗುತ್ತದೆ. Indus Appstore, Indus Appstore ಸೇವೆಗಳು, ಮೊಬೈಲ್ ಅಪ್ಲಿಕೇಶನ್‌ಗಳು, ವಿಷಯ ಅಥವಾ Indus Appstore ಒಳಗೊಂಡಿರುವ ಅಥವಾ ಅದರ ಮೂಲಕ ಲಭ್ಯವಾಗುವಂತೆ ಮಾಡಲಾದ ಇತರ ಸೇವೆಗಳ ಕುರಿತು Indus  ಯಾವುದೇ ರೀತಿಯ ಅಥವಾ ಸ್ವರೂಪದ ಪ್ರಾತಿನಿಧ್ಯಗಳು ಅಥವಾ ವಾರಂಟಿಗಳು ಅಥವಾ ಖಾತರಿಗಳನ್ನು, ಸ್ಪಷ್ಟವಾಗಿ ಅಥವಾ ಸೂಚ್ಯವಾಗಿಯೇ ಆಗಲೀ ನೀಡುವುದಿಲ್ಲ. ಲಿಖಿತವಾಗಿ ನಿರ್ದಿಷ್ಟಪಡಿಸದ ಹೊರತು, Indus Appstore ನ ನಿಮ್ಮ ಬಳಕೆಯಲ್ಲಿ ಅಪಾಯ ಎದುರಾದರೆ ಅದು ನಿಮ್ಮದೇ ಜವಾಬ್ದಾರಿ ಎಂದು ನೀವು ಸ್ಪಷ್ಟವಾಗಿ ಒಪ್ಪುತ್ತೀರಿ. Indus  ಅಥವಾ Indus ‌ನ ಅಂಗಸಂಸ್ಥೆಗಳಿಂದ ಮೌಖಿಕವಾಗಿ ಅಥವಾ ಲಿಖಿತವಾಗಿ, ನೀವು ಪಡೆದ ಯಾವುದೇ ಸಲಹೆ ಅಥವಾ ಮಾಹಿತಿಯು, Indus Appstore ಗೆ ಸಂಬಂಧಿಸಿದಂತೆ Indus ‌ನ ವಾರಂಟಿ ಹಕ್ಕು ನಿರಾಕರಣೆಯನ್ನು ಬದಲಾಯಿಸುತ್ತದೆ ಅಥವಾ Indus ‌ನಿಂದ ಯಾವುದೇ ರೀತಿಯ ವಾರಂಟಿಯನ್ನು ಸೃಷ್ಟಿಸುತ್ತದೆ ಎಂದು ಪರಿಗಣಿಸಲಾಗುವುದಿಲ್ಲ.

ಅನ್ವಯವಾದ ಯಾವುದೇ ವ್ಯಾಪಾರೀಕರಣದ ವಾರಂಟಿ, ತೃಪ್ತಿದಾಯಕ ಗುಣಮಟ್ಟ, ನಿರ್ದಿಷ್ಟ ಉದ್ದೇಶಕ್ಕಾಗಿ ಧೃಢತೆ, ವಿಶ್ವಾಸಾರ್ಹತೆ, ಲಭ್ಯತೆ ಮತ್ತು ಉಲ್ಲಂಘನೆ ಮಾಡದಿರುವಿಕೆ ಸೇರಿದಂತೆ ಅದರೆ ಅದಕ್ಕೆ ಮಾತ್ರ ಸೀಮಿತವಾಗಿರದೇ,  Indus  ಎಲ್ಲಾ ಖಾತರಿಗಳನ್ನು ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ ನಿರಾಕರಿಸುತ್ತದೆ. ಇದರ ಜೊತೆಗೆ, Indus Appstore ಸೇವೆಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ವಿಷಯದ ಕುರಿತಾಗಿ Indus  ಯಾವುದೇ ಕಾರಣಕ್ಕಾಗಿ ಈ ಮುಂದಿನ ಉದ್ದೇಶಗಳಿಗಾಗಿ ಯಾವುದೇ ರೀತಿಯಲ್ಲೂ ಪ್ರತಿನಿಧಿಸುವುದಿಲ್ಲ, ಸಮರ್ಥಿಸುವುದಿಲ್ಲ ಅಥವಾ ಖಾತರಿಪಡಿಸುವುದಿಲ್ಲ, ಅವುಗಳೆಂದರೆ (i) ನಿಮ್ಮ ಹಾರ್ಡ್‌ವೇರ್ ಅಥವಾ ಸಾಫ್ಟ್‌ವೇರ್‌ನೊಂದಿಗೆ ಹೊಂದಾಣಿಕೆಯಾಗುತ್ತದೆ ಎಂದು, (ii) ಅಡೆತಡೆಯಿಲ್ಲದೆ, ಸಕಾಲಿಕವಾಗಿ, ಸುರಕ್ಷಿತವಾಗಿ ಅಥವಾ ದೋಷ-ಮುಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆಂದು, (iii) ವೈರಸ್‌ಗಳು, ಅಡೆತಡೆಗಳು, ಭ್ರಷ್ಟಾಚಾರ ಮತ್ತು/ಅಥವಾ ಇತರ ಭದ್ರತಾ ಸೂಚನೆಗಳನ್ನು ಒಳಗೊಂಡಂತೆ ಆದರೆ ಅವುಗಳಿಗೆ ಸೀಮಿತವಾಗಿರದೆ, ಎಲ್ಲಾ ಹಾನಿಕಾರಕ ಘಟಕಗಳು ಅಥವಾ ದೋಷಗಳಿಂದ ಯಾವಾಗಲೂ ಮುಕ್ತವಾಗಿರುತ್ತದೆ ಅಥವಾ ಯಾವಾಗಲೂ ಲಭ್ಯವಿರುತ್ತದೆ ಎಂದು, ಮತ್ತು/ಅಥವಾ (iv) ಹ್ಯಾಕಿಂಗ್ ಮತ್ತು/ಅಥವಾ ಇತರ ಅನಧಿಕೃತ ಪ್ರವೇಶದಿಂದ ಸುರಕ್ಷಿತವಾಗಿರುತ್ತದೆ ಅಥವಾ ಮುಕ್ತವಾಗಿರುತ್ತದೆ ಎಂದು.

ಯಾವುದೇ ವಿಷಯದ ಬಳಕೆ ಅಥವಾ ವೀಕ್ಷಣೆಯಿಂದ ಉಂಟಾಗುವ ಯಾವುದೇ ಹೊಣೆಗಾರಿಕೆಯನ್ನು Indus  ಸ್ಪಷ್ಟವಾಗಿ ನಿರಾಕರಿಸುತ್ತದೆ. Indus Appstore ನಲ್ಲಿ ಪೋಸ್ಟ್ ಮಾಡಲಾದ ವಿಷಯ ಅಥವಾ ಯಾವುದೇ ಥರ್ಡ್ ಪಾರ್ಟಿ ವಿಷಯ ಸಂಬಂಧಿಸಿದಂತೆ Indus  ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ, ಅಥವಾ ಯಾವುದೇ ಥರ್ಡ್ ಪಾರ್ಟಿ ಜಾಹೀರಾತುದಾರರು ಒದಗಿಸುವ ಉತ್ಪನ್ನಗಳು ಅಥವಾ ಸೇವೆಗಳಿಗೆ ಯಾವುದೇ ಹೊಣೆ ಹೊರುವುದಿಲ್ಲ. ಜಾಹೀರಾತುದಾರರ ಉತ್ಪನ್ನಗಳು ಅಥವಾ ಸೇವೆಗಳ ನಿಮ್ಮ ಬಳಕೆಗೆ ನೀವೇ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. Indus Appstore ಸೇವೆಗಳನ್ನು ಬಳಸುವಾಗ ಜಾಹೀರಾತುದಾರರೊಂದಿಗೆ ನೀವು ಹೊಂದಿರುವ ಯಾವುದೇ ವ್ಯವಹಾರಗಳು, ನಿಮ್ಮ ಮತ್ತು ಜಾಹೀರಾತುದಾರರ ನಡುವೆ ಇರುತ್ತವೆ. ಜಾಹೀರಾತುದಾರರ ವಿರುದ್ಧ ನೀವು ಹೊಂದಿರುವ ಯಾವುದೇ ನಷ್ಟ ಅಥವಾ ಕ್ಲೈಮ್‌ಗೆ Indus  ಜವಾಬ್ದಾರನಾಗಿರುವುದಿಲ್ಲ ಎಂದು ನೀವು ಸಮ್ಮತಿಸುತ್ತೀರಿ.

Indus Appstore ಭಾರತದೊಳಗೆ ಬಳಸಲು ಅನುಮತಿಸಲಾದ ಮೊಬೈಲ್ ಅಪ್ಲಿಕೇಶನ್(ಗಳು)/ ವಿಷಯವನ್ನು ಪ್ರಚಾರ ಮಾಡುವ ಉದ್ದೇಶವನ್ನು ಹೊಂದಿದೆ. Indus Appstore ಭಾರತದ ಹೊರಗೆ ಬಳಸಲು ಸೂಕ್ತವಾಗಿದೆ/ಅದಕ್ಕಾಗಿ ಉದ್ದೇಶಿಸಲ್ಪಟ್ಟಿದೆ ಎಂದು ನಾವು ಪ್ರತಿನಿಧಿಸುವುದಿಲ್ಲ ಅಥವಾ ಖಾತರಿಪಡಿಸುವುದಿಲ್ಲ.

H. ಹೊಣೆಗಾರಿಕೆಯ ಮಿತಿ

ಅನ್ವಯವಾಗುವ ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ, ಯಾವುದೇ ಸಂದರ್ಭದಲ್ಲಿ Indus  ಅಥವಾ ಅದರ ಪರವಾನಗಿದಾರರು, ಅಂಗಸಂಸ್ಥೆಗಳು ನಿಮಗೆ ಯಾವುದೇ ರೀತಿ ಪರೋಕ್ಷವಾಗಿ, ಪ್ರಾಸಂಗಿಕವಾಗಿ, ಪರಿಣಾಮಕಾರಿಯಾಗಿ, ವಿಶೇಷವಾಗಿ, ಮಾದರಿಯಾಗಲು ಅಂತಹ ಹಾನಿಗಳ ಸಾಧ್ಯತೆಯ ಬಗ್ಗೆ ನಿಮಗೆ ಸಲಹೆ ನೀಡಿದ್ದರೂ ಸಹ, ದಂಡನಾತ್ಮಕ ಹಾನಿ ಅಥವಾ ಕೈ ತಪ್ಪಿದ ಲಾಭಗಳಿಗೆ ಹೊಣೆಗಾರರಾಗಿರುವುದಿಲ್ಲ. ಹೊಣೆಗಾರಿಕೆಯ ಸಿದ್ಧಾಂತ ಏನೇ ಇರಲಿ, ಅಂದರೆ ವಂಚನೆ, ತಪ್ಪು ನಿರೂಪಣೆ, ಒಪ್ಪಂದದ ಉಲ್ಲಂಘನೆ, ನಿರ್ಲಕ್ಷ್ಯ, ವೈಯಕ್ತಿಕ ಘಾಸಿ, ಉತ್ಪನ್ನದ ಹೊಣೆಗಾರಿಕೆ, ಉಲ್ಲಂಘನೆ ಅಥವಾ ಯಾವುದೇ ಇತರ ಸಿದ್ಧಾಂತದಿಂದಾಗುವ ಹಾನಿಗಳ ಸಾಧ್ಯತೆಯ ಬಗ್ಗೆ ನಿಮಗೆ ತಿಳಿಸಲಾಗಿದೆಯೋ ಇಲ್ಲವೋ ಆದರೆ ಈ ಮಿತಿ ಅನ್ವಯಿಸುತ್ತದೆ, ಯಾವುದೇ ಹಕ್ಕಿಗಾಗಿ Indus  ಅಂತಹ ಪಾರ್ಟಿಗೆ ಪರಿಹಾರ ನೀಡಬೇಕಾದ ಸನ್ನಿವೇಷದ ಮಟ್ಟಿಗೆ ಈ ಮಿತಿ ಮತ್ತು ವಿನಾಯಿತಿಯು ನೀವು ಯಾವುದೇ ಇತರ ಪಾರ್ಟಿಯ ವಿರುದ್ಧ ತರಬಹುದಾದ ಯಾವುದೇ ಕ್ಲೈಮ್‌ಗೆ ಸಹ ಅನ್ವಯಿಸುತ್ತದೆ.  ಯಾವುದೇ ಸಂದರ್ಭದಲ್ಲಿ ಈ ನಿಯಮಗಳ ಅಡಿಯಲ್ಲಿ Indus ‌ನ ಒಟ್ಟು ಹೊಣೆಗಾರಿಕೆಯು ನೂರು ರೂಪಾಯಿಗಳನ್ನು (INR 100) ಮೀರಬಾರದು. ಸೇವೆಗಳ ಬಳಕೆಯ ಮೂಲಕ ಕೈ ತಪ್ಪಿ ಹೋದ ಅಥವಾ ಭ್ರಷ್ಟಗೊಂಡ ಯಾವುದೇ ಡೇಟಾಗೆ Indus  ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ; ನಿಮ್ಮ ಡೇಟಾದ ಬ್ಯಾಕಪ್‌ಗಳನ್ನು ನಿರ್ವಹಿಸುವ ಜವಾಬ್ದಾರಿ ನಿಮ್ಮದಾಗಿರುತ್ತದೆ.

I. ನಷ್ಟ ಪರಿಹಾರ

ಈ ಮುಂದೆ ತಿಳಿಸುವ ಸಮಂಜಸವಾದ ವಕೀಲರ ಶುಲ್ಕಗಳು ಸೇರಿದಂತೆ ಯಾವುದೇ ಮತ್ತು ಎಲ್ಲಾ ಹಕ್ಕುಗಳು, ಕ್ರಮಗಳು, ಹೊಣೆಗಾರಿಕೆಗಳು, ನಷ್ಟಗಳು, ಹಾನಿಗಳು, ತೀರ್ಪುಗಳು, ಖರ್ಚು ವೆಚ್ಚಗಳಿಂದ ಮತ್ತು ಅದರ ವಿರುದ್ಧ ನೀವು Indus , ಅದರ ಅಧಿಕಾರಿಗಳು, ನಿರ್ದೇಶಕರು ಮತ್ತು ಏಜೆಂಟ್‌ಗಳು ಮತ್ತು Indus  ಪರವಾಗಿ ಕಾರ್ಯನಿರ್ವಹಿಸುವ ಯಾವುದೇ ಪಾರ್ಟಿಗೆ ನಷ್ಟ ಪರಿಹಾರ ನೀಡುವುದರಿಂದ ದೂರ ಇಡಲು, ಬಿಡುಗಡೆ ಮಾಡಲು ಮತ್ತು ಅಂತಹ ಹಾನಿಯಿಂದ ತಪ್ಪಿಸಲು ಸಮ್ಮತಿಸುತ್ತೀರಿ. ಅವುಗಳೆಂದರೆ (i) Indus Appstore ಮತ್ತು Indus Appstore ಗಳ ಯಾವುದೇ ಬಳಕೆಯಿಂದ, (ii) ನಿಯಮಗಳ ಉಲ್ಲಂಘನೆ, ಅಥವಾ (iii) ಅನ್ವಯವಾಗುವ ಯಾವುದೇ ಕಾನೂನಿನ ಅಥವಾ ಯಾವುದೇ ಥರ್ಡ್ ಪಾರ್ಟಿ ಹಕ್ಕುಗಳ ಉಲ್ಲಂಘನೆಯಿಂದ. 

J. ವಜಾಗೊಳಿಸುವುದು:

ನೀವು Indus Appstore ನ ಬಳಕೆಯೊಂದಿಗೆ ಸಂಬಂಧ ಹೊಂದಿರಬಹುದಾದ ನಿಯಮಗಳು ಅಥವಾ ಯಾವುದೇ ಇತರ ಒಪ್ಪಂದಗಳು ಅಥವಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದೀರಿ ಎಂದು Indus ನಿರ್ಧರಿಸಿದರೆ, Indus Appstore ಗೆ ನಿಮ್ಮ ಪ್ರವೇಶವನ್ನು ಪೂರ್ಣವಾಗಿ ಅಥವಾ ಭಾಗಶಃ ಕೊನೆಗೊಳಿಸುವ ಹಕ್ಕನ್ನು Indus ಕಾಯ್ದಿರಿಸಿಕೊಂಡಿರುತ್ತದೆ. ಇದಲ್ಲದೆ, Indus  ತನ್ನ ಸ್ವಂತ ವಿವೇಚನೆಯಿಂದ ಮತ್ತು ಪೂರ್ವ ಸೂಚನೆ ಇಲ್ಲದೆ, Indus Appstore ಗೆ ನಿಮ್ಮ ಪ್ರವೇಶವನ್ನು ಕೊನೆಗೊಳಿಸಬಹುದು ಎಂದು ನೀವು ಒಪ್ಪುತ್ತೀರಿ, ಅದು ಈ ಮುಂದಿನ ಕಾರಣಗಳನ್ನು ಒಳಗೊಂಡಿರಬಹುದು (ಆದರೆ ಅವುಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ) (i) ಕಾನೂನು ಜಾರಿ ಸಂಸ್ಥೆಗಳು ಅಥವಾ ಇತರ ಸರ್ಕಾರಿ ಸಂಸ್ಥೆಗಳ ವಿನಂತಿಯ ಮೇರೆಗೆ, (ii) Indus Appstore ಮತ್ತು/ಅಥವಾ Indus Appstore ಸೇವೆಗಳ ಸ್ಥಗಿತಗೊಳಿಸುವಿಕೆ ಅಥವಾ ವಿಷಯ ವಸ್ತುಗಳ ಮಾರ್ಪಾಡು, ಅಥವಾ (iii) ಅನಿರೀಕ್ಷಿತ ತಾಂತ್ರಿಕ ಸಮಸ್ಯೆಗಳು ಅಥವಾ ಸಮಸ್ಯೆಗಳು. ನಿಮ್ಮ ಖಾತೆಯನ್ನು ಮುಕ್ತಾಯಗೊಳಿಸಲು ನೀವು ಬಯಸಿದರೆ, ದಯವಿಟ್ಟು [email protected] ಗೆ ಇಮೇಲ್ ಮೂಲಕ Indus ‌ಗೆ ತಿಳಿಸಿ. ನಿಮ್ಮ ಇಮೇಲ್ ಸ್ವೀಕರಿಸಿದ ನಂತರ, ಸೂಕ್ತ ಸಮಯದೊಳಗೆ Indus  ನಿಮ್ಮ ಖಾತೆಯನ್ನು ಕೊನೆಗೊಳಿಸುತ್ತದೆ. ನಿಮ್ಮ ಖಾತೆಯನ್ನು ಕೊನೆಗೊಳಿಸಿದ ನಂತರ, ಅನ್ವಯವಾಗುವ ಕಾನೂನು ಮತ್ತು/ಅಥವಾ Indus ‌ನ ಆಂತರಿಕ ಆರ್ಕೈವಿಂಗ್ ಪಾಲಿಸಿಗಳ ಅಡಿಯಲ್ಲಿ ಅಗತ್ಯವಿಲ್ಲದಿದ್ದರೆ, ನಿಮ್ಮ ಖಾತೆಗೆ ಸಂಬಂಧಿಸಿದ ಎಲ್ಲಾ ಡೇಟಾ ಅಥವಾ ಇತರ ಮಾಹಿತಿಯನ್ನು ಅಳಿಸಬಹುದು. ನಿಮ್ಮ ಖಾತೆಯ ಮುಕ್ತಾಯದಿಂದ ಉಂಟಾಗುವ ಅಂತಹ ಅಳಿಸುವಿಕೆಗೆ Indus  ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ. ಯಾವುದೇ ಪಾರ್ಟಿಯು ಮುಕ್ತಾಯಗೊಳಿಸಿರಲಿ, ನೀವು ಯಾವುದೇ ವಿಷಯ ಮತ್ತು Indus Appstore ಸೇವೆಗಳನ್ನು ಒಳಗೊಂಡಂತೆ Indus Appstore ನ ಎಲ್ಲಾ ಬಳಕೆಯನ್ನು ನಿಲ್ಲಿಸಬೇಕು.

K. ಸಾಮಾನ್ಯ ಕಾನೂನು ನಿಯಮಗಳು:

a. ಇದರಲ್ಲಿರುವ ವಿಷಯಕ್ಕೆ ಸಂಬಂಧಿಸಿದಂತೆ ಪಾರ್ಟಿಗಳ ಸಂಪೂರ್ಣ ತಿಳುವಳಿಕೆಯನ್ನು ಈ ನಿಯಮಗಳು ರೂಪಿಸುತ್ತವೆ ಮತ್ತು ಇದು ಇವರಿಬ್ಬರ ನಡುವಿನ ಎಲ್ಲಾ ಹಿಂದಿನ ತಿಳುವಳಿಕೆಗಳು, ಮಾತುಕತೆಗಳು, ಚರ್ಚೆಗಳು, ಬರವಣಿಗೆಗಳು ಮತ್ತು ಒಪ್ಪಂದಗಳನ್ನು ರದ್ದುಗೊಳಿಸುತ್ತವೆ.

b. ಈ ನಿಯಮಗಳಲ್ಲಿ ಒಳಗೊಳ್ಳದ ಯಾವುದನ್ನೂ ಯಾವುದೇ ಪಾರ್ಟಿಯು ಪಾಲುದಾರ, ಏಜೆಂಟ್, ಉದ್ಯೋಗಿ ಅಥವಾ ಇತರ ಪಾರ್ಟಿಯ ಕಾನೂನು ಪ್ರತಿನಿಧಿಯಾಗಿ ರೂಪಿಸುತ್ತದೆ ಅಥವಾ ಯಾವುದೇ ಉದ್ದೇಶಕ್ಕಾಗಿ ಅವರ ನಡುವೆ ಯಾವುದೇ ವಿಶ್ವಾಸಾರ್ಹ ಸಂಬಂಧವನ್ನು ಸೃಷ್ಟಿಸುತ್ತದೆ ಎಂದು ಪರಿಗಣಿಸಬೇಕಾಗಿಲ್ಲ.

c. ಬರವಣಿಗೆಯಲ್ಲಿ ವಿನಾಯಿತಿ ಎಂದು ವ್ಯಕ್ತಪಡಿಸದ ಹೊರತು, ಈ ನಿಯಮಗಳ ಮೂಲಕ ಒಂದು ಪಾರ್ಟಿಗೆ ನೀಡಲಾದ ಯಾವುದೇ ಅಧಿಕಾರ, ಹಕ್ಕು ಅಥವಾ ಪರಿಹಾರವನ್ನು ಚಲಾಯಿಸುವಲ್ಲಿ ಆ ಪಾರ್ಟಿಯು ಯಾವುದೇ ವೈಫಲ್ಯ, ವಿಳಂಬ, ಸಡಿಲಿಕೆ ಅಥವಾ ಲಂಪಟತನ ಕಂಡುಬಂದರೆ ಅದನ್ನು ಆ ಅಧಿಕಾರ, ಹಕ್ಕು ಅಥವಾ ಪರಿಹಾರದ ವಿನಾಯಿತಿಯಾಗಿ ತೆಗೆದುಕೊಳ್ಳುವುದಿಲ್ಲ.

d. ಒಂದುವೇಳೆ ಇಲ್ಲಿರುವ ನಿಯಮಗಳ ಯಾವುದೇ ನಿಯಮವನ್ನು ಯಾವುದೇ ನ್ಯಾಯಾಲಯ/ನ್ಯಾಯಮಂಡಳಿ/ಶಾಸಕಾಂಗವು ಕಾನೂನುಬಾಹಿರ ಅಥವಾ ಜಾರಿಗೊಳಿಸಲಾಗದು ಎಂದು ಘೋಷಿಸಿದರೆ, ಆಗ ಕಾನೂನುಬಾಹಿರ ಅಥವಾ ಜಾರಿಗೊಳಿಸಲಾಗದು ಎಂದು ಘೋಷಿಸಿದ ಆ ನಿಯಮ ಮತ್ತು ಉಪಬಂಧವು ಪೂರ್ವನಿದರ್ಶನದ ಸ್ಥಿತಿಯ ಸ್ವರೂಪದಲ್ಲಿರದ ಹೊರತು ಅಥವಾ ನಿಯಮಗಳ ಸಾರದ ಮೇಲೆ ಪರಿಣಾಮ ಬೀರದ ಹೊರತು, ಅಥವಾ ಈ ನಿಯಮಗಳ ಉಳಿದ ಭಾಗಗಳ ಅವಿಭಾಜ್ಯ ಅಂಗವನ್ನು ಒಳಗೊಂಡಿದ್ದು ಅದನ್ನು ಅದರಿಂದ ಬೇರ್ಪಡಿಸಲಾಗದು ಎಂದು ಪರಿಗಣಿಸದ ಹೊರತು ಇದು ಇತರ ನಿಯಮಗಳು ಅಥವಾ ಉಪಬಂಧಗಳ ಸಿಂಧುತ್ವ ಅಥವಾ ಜಾರಿಗೊಳಿಸುವಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ. ಅಂತಹ ಸಂದರ್ಭದಲ್ಲಿ, ಕಾನೂನುಬಾಹಿರ/ಜಾರಿಗೊಳಿಸಲಾಗದ ಉಪಬಂಧವನ್ನು ಸೂಕ್ತವಾಗಿ ಪರಿಷ್ಕರಿಸಲು ಮತ್ತು ನಿಯಮಗಳ ಉದ್ದೇಶಗಳನ್ನು ಸಾಧಿಸಲು ಅನುಕೂಲವಾಗುವಂತೆ Indus ‌ಗೆ ಸಮಂಜಸವಾಗಿ ಅಗತ್ಯವಿರುವ ಯಾವುದೇ ಇತರ ದಾಖಲೆಗಳನ್ನು ನೀವು ನಮೂದಿಸಲು ಸಮ್ಮತಿಸುತ್ತೀರಿ.

e. ಸೂಚನೆಗಳು: Indus Appstore ಗೆ ಸಂಬಂಧಿಸಿದಂತೆ Indus  ಈ ಮುಂದಿನ ವಿಧಾನಗಳ ಮೂಲಕ ನೋಟಿಸ್ ಕಳುಹಿಸಬಹುದು. (i) ನಿಮ್ಮ ಬಳಕೆದಾರ ಲಾಗಿನ್ ಖಾತೆಯಲ್ಲಿ ಪಟ್ಟಿ ಮಾಡಲಾದ ಫೋನ್ ಸಂಖ್ಯೆಗೆ ಸಂದೇಶ ಅಥವಾ ಅಧಿಸೂಚನೆಯನ್ನು ಕಳುಹಿಸುವುದು, ಅಥವಾ (ii) ನೀವು Indus  ಆಪ್‌ಸ್ಟೋರ್ ಡೌನ್‌ಲೋಡ್ ಮಾಡಿಕೊಂಡಿರುವ ನಿಮ್ಮ ಸಾಧನಕ್ಕೆ ಪುಶ್ ನೋಟಿಫಿಕೇಶನ್ ಕಳುಹಿಸುವುದು, ಅಥವಾ (iii) Indus  ಆಪ್‌ಸ್ಟೋರ್‌ನಲ್ಲಿ ಇನ್-ಆ್ಯಪ್‌ ನೋಟಿಫಿಕೇಶನ್(ಗಳು).

f. ಈ ವಿಷಯದಲ್ಲಿ ನಿಮಗೆ ಯಾವುದೇ ಸೂಚನೆ ನೀಡದೆ, ನಿಯಮಗಳನ್ನು (ಭಾಗಶಃ ಅಥವಾ ಸಂಪೂರ್ಣವಾಗಿ) ಬೇರೆ ಯಾವುದೇ ಪಾರ್ಟಿಗೆ ನಿಯೋಜಿಸುವ ಹಕ್ಕನ್ನು Indus  ಹೊಂದಿರುತ್ತದೆ.

g. ಆಡಳಿತ ಕಾನೂನು ಮತ್ತು ವಿವಾದ ಪರಿಹಾರ: Indus Appstore ನ ನಿಯಮಗಳು ಮತ್ತು ನಿಮ್ಮ ಬಳಕೆಯನ್ನು ಭಾರತದ ಕಾನೂನುಗಳು ನಿಯಂತ್ರಿಸುತ್ತವೆ ಎಂದು ನೀವು ಸ್ಪಷ್ಟವಾಗಿ ಒಪ್ಪುತ್ತೀರಿ. ನಿಯಮಗಳಿಗೆ ಸಂಬಂಧಿಸಿದಂತೆ ಉದ್ಭವಿಸುವ ಎಲ್ಲಾ ವಿಷಯಗಳನ್ನು ಇತ್ಯರ್ಥ ಪಡಿಸಲು ಮತ್ತು ನಿರ್ಣಯಿಸಲು ಕರ್ನಾಟಕದ ಬೆಂಗಳೂರಿನ ನ್ಯಾಯಾಲಯಗಳು ವಿಶೇಷ ನ್ಯಾಯವ್ಯಾಪ್ತಿಯನ್ನು ಹೊಂದಿರುತ್ತವೆ ಎಂದು ನೀವು ಒಪ್ಪುತ್ತೀರಿ.

h. ನಿಯಮಗಳ ಅಡಿಯಲ್ಲಿ ಪಕ್ಷವೊಂದರ ಹಕ್ಕುಗಳು, ಅಧಿಕಾರಗಳು ಮತ್ತು ಪರಿಹಾರಗಳು ಸಂಚಿತವಾಗಿರುತ್ತವೆ ಮತ್ತು ಕಾನೂನುಬದ್ಧವಾಗಿ ಅಥವಾ ಸಮಾನತೆಯ ದೃಷ್ಟಿಯಿಂದ ಪಾರ್ಟಿಗೆ ಲಭ್ಯವಿರುವ ಯಾವುದೇ ಇತರ ಹಕ್ಕುಗಳು, ಅಧಿಕಾರಗಳು ಮತ್ತು ಪರಿಹಾರಗಳಿಂದ ಪ್ರತ್ಯೇಕವಾಗಿರುವುದಿಲ್ಲ.

i. ತಿದ್ದುಪಡಿಗಳು: ಈ ನಿಯಮಗಳು ಬದಲಾವಣೆಗಳಿಗೆ ಒಳಪಟ್ಟಿರುತ್ತವೆ. Indus Appstore ನಲ್ಲಿ ನಿಯಮಗಳ ನವೀಕರಿಸಿದ ಆವೃತ್ತಿಯನ್ನು ಪೋಸ್ಟ್ ಮಾಡುವ ಮೂಲಕ ಯಾವುದೇ ಸಮಯದಲ್ಲಿ ಈ ನಿಯಮಗಳನ್ನು ತಿದ್ದುಪಡಿ ಮಾಡುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿರುತ್ತೇವೆ. ನವೀಕರಣಗಳು/ಬದಲಾವಣೆಗಳಿಗಾಗಿ ನಿಯಮಗಳನ್ನು ನಿಯತಕಾಲಿಕವಾಗಿ ಪರಿಶೀಲಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಯಾವುದೇ ಬದಲಾವಣೆಯನ್ನು ಪೋಸ್ಟ್ ಮಾಡಿದ ನಂತರ ನೀವು Indus Appstore ಅನ್ನು ನಿರಂತರವಾಗಿ ಬಳಸುತ್ತಿದ್ದರೆ ಅದು ತಿದ್ದುಪಡಿ ಮಾಡಿದ ನಿಯಮಗಳಿಗೆ ನಿಮ್ಮ ಒಪ್ಪಿಗೆಯನ್ನು ಸೂಚಿಸುತ್ತದೆ.

j. ನೀವು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಣೆ ಮಾಡುವುದನ್ನು ಒತ್ತಾಯಿಸಲು ಅಥವಾ ಜಾರಿಗೊಳಿಸಲು ನಾವು ವಿಫಲವಾದರೆ, ಅದು ನಮ್ಮ ಯಾವುದೇ ಹಕ್ಕುಗಳನ್ನು ಬಿಟ್ಟುಕೊಟ್ಟಂತೆ ಆಗುವುದಿಲ್ಲ.