
Privacy Policy
- ಗೌಪ್ಯತಾ ನೀತಿ
- ಮಾಹಿತಿ ಸಂಗ್ರಹ
- ಮಾಹಿತಿಯ ಉದ್ದೇಶ ಮತ್ತು ಬಳಕೆ
- ಕುಕೀಸ್ ಅಥವಾ ಅಂತಹುದೇ ತಂತ್ರಜ್ಞಾನಗಳು
- ಮಾಹಿತಿ ಹಂಚಿಕೆ ಮತ್ತು ಬಹಿರಂಗಪಡಿಸುವಿಕೆಗಳು
- ಸಂಗ್ರಹಣೆ ಮತ್ತು ಉಳಿಸಿಕೊಳ್ಳುವಿಕೆ
- ಸಮಂಜಸ ಭದ್ರತಾ ಅಭ್ಯಾಸಗಳು
- ಥರ್ಡ್ ಪಾರ್ಟಿ ಉತ್ಪನ್ನಗಳು, ಸೇವೆಗಳು ಅಥವಾ ವೆಬ್‌ಸೈಟ್‌ಗಳು
- ನಿಮ್ಮ ಸಮ್ಮತಿ
- ಆಯ್ಕೆ/ಆಯ್ಕೆಯಿಂದ ಹೊರಗುಳಿಯುವುದು
- ವೈಯಕ್ತಿಕ ಮಾಹಿತಿ ಆ್ಯಕ್ಸೆಸ್/ಸರಿಪಡಿಸುವಿಕೆ
- ಮಕ್ಕಳ ಮಾಹಿತಿ
- ಪಾಲಿಸಿಯಲ್ಲಿ ಬದಲಾವಣೆಗಳು
- ನಮ್ಮನ್ನು ಸಂಪರ್ಕಿಸಿ
ಗೌಪ್ಯತಾ ನೀತಿ
ಅಪ್‌ಡೇಟ್ ಮಾಡಲಾಗಿದೆ [] ಆಗಸ್ಟ್, 2025
ಈ ಪಾಲಿಸಿಯು Indus Appstore ಪ್ರೈವೇಟ್ ಲಿಮಿಟೆಡ್ (ಹಿಂದೆ ‘OSLabs Technology (India)’ ಎಂದು ಕರೆಯಲಾಗುತ್ತಿತ್ತು) ಎಂಬ ಪ್ರೈವೇಟ್ ಲಿಮಿಟೆಡ್‌ಗೆ ಅನ್ವಯಿಸುತ್ತದೆ, ಇದು ಕಂಪನಿಗಳ ಕಾಯ್ದೆ, 2013 ರ ಅಡಿಯಲ್ಲಿ ಸಂಘಟಿತವಾಗಿದ್ದು, ಅದರ ನೋಂದಾಯಿತ ಕಚೇರಿ #51/117, ನೆಲ್ಸನ್ ಟವರ್ಸ್, ನೆಲ್ಸನ್ ಮಾಣಿಕ್ಕಮ್ ರಸ್ತೆ, ಅಮಿಂಜಿಕರೈ, ಚೆನ್ನೈ, ತಮಿಳುನಾಡು, ಭಾರತ 600029. ಇಲ್ಲಿ ನೆಲೆಗೊಂಡಿದೆ. ಈ ಪಾಲಿಸಿಯು Indus ಮತ್ತು ಅದರ ಅಂಗಸಂಸ್ಥೆಗಳು/ಘಟಕಗಳು/ಅಧೀನ ಸಂಸ್ಥೆಗಳು/ಸಹವರ್ತಿಗಳು (ಒಟ್ಟಾರೆಯಾಗಿ “Indus / “ನಾವು”/ “ನಮ್ಮ” / “ನಮ್ಮದು” ಸಂದರ್ಭಕ್ಕೆ ಅನುಗುಣವಾಗಿ) ನಿಮ್ಮ ವೈಯಕ್ತಿಕ ಮಾಹಿತಿಯನ್ನು https://www.indusappstore.com/ (“Indus ವೆಬ್‌ಸೈಟ್”), Indus Appstore – ಡೆವಲಪರ್ ಪ್ಲಾಟ್‌ಫಾರ್ಮ್ (“ಡೆವಲಪರ್ ಪ್ಲಾಟ್‌ಫಾರ್ಮ್”), Indus Appstore ಮೊಬೈಲ್ ಅಪ್ಲಿಕೇಶನ್ ಮತ್ತು ಇತರ ಸಂಬಂಧಿತ ಸೇವೆಗಳ ಮೂಲಕ (ಒಟ್ಟಾರೆಯಾಗಿ “ಪ್ಲಾಟ್‌ಫಾರ್ಮ್‌ಗಳು” ಎಂದು ಕರೆಯಲಾಗುತ್ತದೆ) ಹೇಗೆ ಸಂಗ್ರಹಿಸುತ್ತದೆ, ಶೇಖರಿಸುತ್ತದೆ, ಬಳಸುತ್ತದೆ ಮತ್ತು ಪ್ರಕ್ರಿಯೆಗೊಳಿಸುತ್ತದೆ ಎಂಬುದನ್ನು ವಿವರಿಸುತ್ತದೆ. ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಮೂಲಕ, Indus ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ, ಯಾವುದೇ ಇತರ ಸೈಟ್‌ಗಳಲ್ಲಿ ನಮ್ಮ ವಿಷಯದೊಂದಿಗೆ ಸಂವಹನ ನಡೆಸುವ ಮೂಲಕ, ನಿಮ್ಮ ಮಾಹಿತಿಯನ್ನು ಒದಗಿಸುವ ಮೂಲಕ ಅಥವಾ ನಮ್ಮ ಉತ್ಪನ್ನ/ಸೇವೆಗಳನ್ನು ಪಡೆಯುವ ಮೂಲಕ, ನೀವು ಈ ಗೌಪ್ಯತಾ ನೀತಿ (“ಪಾಲಿಸಿ”) ಮತ್ತು ಅನ್ವಯವಾಗುವ ಸೇವೆ/ಉತ್ಪನ್ನ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರಲು ಸ್ಪಷ್ಟವಾಗಿ ಒಪ್ಪುತ್ತೀರಿ. ನೀವು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಮತ್ತು ನಿಮ್ಮ ಗೌಪ್ಯತೆಯನ್ನು ನಾವು ಗೌರವಿಸುತ್ತೇವೆ, ಸುರಕ್ಷಿತ ವಹಿವಾಟುಗಳು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯ ರಕ್ಷಣೆಗಾಗಿ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಳ್ಳುತ್ತೇವೆ. ಈ ಗೌಪ್ಯತಾ ನೀತಿಯನ್ನು ಭಾರತದ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಪ್ರಕಟಿಸಲಾಗಿದೆ ಮತ್ತು ಅರ್ಥೈಸಲಾಗುತ್ತದೆ. ಇದರಲ್ಲಿ ಮಾಹಿತಿ ತಂತ್ರಜ್ಞಾನ (ಸಮಂಜಸ ಭದ್ರತಾ ಅಭ್ಯಾಸಗಳು ಮತ್ತು ಕಾರ್ಯವಿಧಾನಗಳು ಮತ್ತು ಸೂಕ್ಷ್ಮ ವೈಯಕ್ತಿಕ ಡೇಟಾ ಅಥವಾ ಮಾಹಿತಿ) ನಿಯಮಗಳು, 2011, ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಅಡಿಯಲ್ಲಿ, ವೈಯಕ್ತಿಕ ಮಾಹಿತಿಯ ಸಂಗ್ರಹಣೆ, ಬಳಕೆ, ಶೇಖರಣೆ, ವರ್ಗಾವಣೆ, ಬಹಿರಂಗಪಡಿಸುವಿಕೆಗಾಗಿ ಗೌಪ್ಯತಾ ನೀತಿಯನ್ನು ಪ್ರಕಟಿಸುವ ಅಗತ್ಯವಿದೆ. ವೈಯಕ್ತಿಕ ಮಾಹಿತಿ ಎಂದರೆ ನಿರ್ದಿಷ್ಟ ವ್ಯಕ್ತಿಗೆ ಲಿಂಕ್ ಮಾಡಬಹುದಾದ ಎಲ್ಲ ಮಾಹಿತಿ ಮತ್ತು ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತದೆ (ಸೂಕ್ಷ್ಮ ಸ್ವಭಾವದ ಕಾರಣ ಹೆಚ್ಚಿನ ರಕ್ಷಣೆ ಅಗತ್ಯವಿರುವ ಎಲ್ಲ ವೈಯಕ್ತಿಕ ಮಾಹಿತಿ). ಸಾರ್ವಜನಿಕ ಡೊಮೇನ್‌ನಲ್ಲಿ ಉಚಿತವಾಗಿ ಲಭ್ಯವಿರುವ ಅಥವಾ ಆ್ಯಕ್ಸೆಸ್ ಮಾಡಬಹುದಾದ ಯಾವುದೇ ಮಾಹಿತಿಯನ್ನು ಹೊರತುಪಡಿಸಿ, ಎರಡನ್ನೂ ಇನ್ನು ಮುಂದೆ ‘ವೈಯಕ್ತಿಕ ಮಾಹಿತಿ’ ಎಂದು ಕರೆಯಲಾಗುತ್ತದೆ. ಈ ಗೌಪ್ಯತಾ ನೀತಿಯನ್ನು ನೀವು ಒಪ್ಪದಿದ್ದರೆ, ದಯವಿಟ್ಟು ನಮ್ಮ ಪ್ಲಾಟ್‌ಫಾರ್ಮ್‌ಗಳನ್ನು ಬಳಸಬೇಡಿ ಅಥವಾ ಆ್ಯಕ್ಸೆಸ್ ಮಾಡಬೇಡಿ.
ಮಾಹಿತಿ ಸಂಗ್ರಹ
ನೀವು ನಮ್ಮ ಸೇವೆಗಳು ಅಥವಾ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವಾಗ ಅಥವಾ ಯಾವುದೇ ರೀತಿಯಲ್ಲಿ ನಮ್ಮೊಂದಿಗೆ ಸಂವಹನ ನಡೆಸಿದಾಗ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಬಹುದು. ನೀವು ವಿನಂತಿಸಿದ ಸೇವೆಗಳನ್ನು ಒದಗಿಸಲು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ನಿರಂತರವಾಗಿ ಸುಧಾರಿಸಲು ಸೂಕ್ತವಾದ ಮತ್ತು ಸಂಪೂರ್ಣವಾಗಿ ಅಗತ್ಯವಾದ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.
ಸಂಗ್ರಹಿಸಲಾದ ವೈಯಕ್ತಿಕ ಮತ್ತು ಸೂಕ್ಷ್ಮ ವೈಯಕ್ತಿಕ ಮಾಹಿತಿಯು ಇವುಗಳನ್ನು ಒಳಗೊಂಡಿರುತ್ತದೆ. ಆದರೆ ಇವುಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ:
- ನೀವು ನಮ್ಮೊಂದಿಗೆ ಖಾತೆಯನ್ನು ರಚಿಸುವಾಗ ನಿಮ್ಮ ಫೋನ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಯಾವುದೇ ಇತರ ವಿವರಗಳು
- ನೀವು ಈಗಾಗಲೇ PhonePe ಗ್ರೂಪ್ ಖಾತೆಯನ್ನು ಹೊಂದಿದ್ದರೆ, ನಿಮ್ಮ ಹೆಸರು, ಇಮೇಲ್ ಐಡಿ ಮತ್ತು ನೀವು ಒದಗಿಸಿದ ಇತರ ವಿವರಗಳಂತಹ, ಆದರೆ ಇವುಗಳಿಗೆ ಮಾತ್ರ ಸೀಮಿತವಾಗಿರದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ನಿಮ್ಮ PhonePe ಪ್ರೊಫೈಲ್‌ನಿಂದ ಪಡೆಯಬಹುದು.
- ನಿಮ್ಮ ಜಾಹೀರಾತು ಐಡಿ, ಇನ್‌ಸ್ಟಾಲ್ ಮಾಡಲಾದ ಆ್ಯಪ್‌ಗಳ ಪಟ್ಟಿ, ಆ್ಯಪ್ ಬಳಕೆಯ ವಿವರಗಳು, ವಿಮರ್ಶೆಗಳು ಮತ್ತು ರೇಟಿಂಗ್‌ಗಳು, ಆ್ಯಪ್ ಭಾಷೆ, ಬಳಕೆಯ ಅಂಕಿಅಂಶಗಳು ಮತ್ತು ನೀವು ನಮ್ಮ ಪ್ಲಾಟ್‌ಫಾರ್ಮ್‌ಗಳನ್ನು ಆ್ಯಕ್ಸೆಸ್ ಮಾಡಿದಾಗ ಅಥವಾ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ Indus ಜಾಹೀರಾತುಗಳು ಅಥವಾ ವಿಷಯವನ್ನು ವೀಕ್ಷಿಸಿದಾಗ ಸಂಗ್ರಹಿಸಲಾದ ಕೆಲವು ಡೇಟಾದಂತಹ ನಿಮ್ಮ ಚಟುವಟಿಕೆ ಮಾಹಿತಿ.
- ನಾವು ಜಂಟಿಯಾಗಿ ಸೇವೆಗಳನ್ನು ನೀಡಿದಾಗ ಅಥವಾ ನಮ್ಮ ಜಾಹೀರಾತುಗಳು ಅವರ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಣಿಸಿಕೊಂಡಾಗ, ಒರಿಜಿನಲ್ ಎಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚರರ್ಸ್ (OEM ಗಳು) ಸೇರಿದಂತೆ ಥರ್ಡ್-ಪಾರ್ಟಿ ಪಾಲುದಾರರಿಂದ ನಿಮ್ಮ ಮತ್ತು ನಿಮ್ಮ ಚಟುವಟಿಕೆಗಳ ಬಗ್ಗೆ ನಾವು ಮಾಹಿತಿಯನ್ನು ಪಡೆಯುತ್ತೇವೆ.
- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಸಾಧನದ ವಿವರಗಳಾದ ಸಾಧನ ಗುರುತಿಸುವಿಕೆ, ಸಾಧನ ಭಾಷೆ, ಸಾಧನ ಮಾಹಿತಿ, ಇಂಟರ್‌ನೆಟ್ ಬ್ಯಾಂಡ್‌ವಿಡ್ತ್, ಮೊಬೈಲ್ ಸಾಧನದ ತಯಾರಿಕೆ ಮತ್ತು ಮಾದರಿ, ವ್ಯಯಿಸಿದ ಸಮಯ, ಇನ್‌ಸ್ಟಾಲ್ ಮಾಡಲಾದ ಆ್ಯಪ್‌ಗಳು ಮತ್ತು ಸಂಬಂಧಿತ ಮಾಹಿತಿ, ಐಪಿ ವಿಳಾಸ ಮತ್ತು ಲೊಕೇಶನ್, ಮೈಕ್ರೊಫೋನ್, ಸಂಪರ್ಕ ಮಾಹಿತಿ ಇತ್ಯಾದಿ.
ನೀವು ಡೆವಲಪರ್ ಆಗಿದ್ದರೆ, ಡೆವಲಪರ್ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ನೋಂದಣಿ ಮತ್ತು ಪರಿಶೀಲನೆಗಾಗಿ ನಾವು ನಿಮ್ಮ ಹೆಸರು, ಇಮೇಲ್, ಸಂಪೂರ್ಣ ವಿಳಾಸ, PAN ವಿವರಗಳು, ಮತದಾರರ ಗುರುತಿನ ಚೀಟಿ, ಡ್ರೈವರ್ ಲೈಸೆನ್ಸ್ ವಿವರಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸುತ್ತೇವೆ.
ನಿಮ್ಮ ಪ್ಲಾಟ್‌ಫಾರ್ಮ್‌ಗಳ ಬಳಕೆಯ ವಿವಿಧ ಹಂತಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಬಹುದು, ಉದಾಹರಣೆಗೆ:
- ಪ್ಲಾಟ್‌ಫಾರ್ಮ್‌ಗಳಿಗೆ ಭೇಟಿ ನೀಡಿದಾಗ
- ನೀವು ಪ್ಲಾಟ್‌ಫಾರ್ಮ್‌ಗಳಲ್ಲಿ “ಬಳಕೆದಾರ” ಎಂದು ನೋಂದಾಯಿಸಿಕೊಂಡಾಗ, ಪ್ಲಾಟ್‌ಫಾರ್ಮ್‌ನ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಂಡಾಗ ಅಥವಾ ಡೆವಲಪರ್ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಖಾತೆಯನ್ನು ಪರಿಶೀಲಿಸುವಂತಹ ಪ್ಲಾಟ್‌ಫಾರ್ಮ್‌ಗಳ ಬಳಕೆಯ ವಿವಿಧ ಹಂತಗಳಲ್ಲಿ ನಾವು ಮಾಹಿತಿಯನ್ನು ಸಂಗ್ರಹಿಸಬಹುದು.
- ಪ್ಲಾಟ್‌ಫಾರ್ಮ್‌ಗಳಲ್ಲಿ ವಹಿವಾಟು ನಡೆಸಿದಾಗ ಅಥವಾ ವಹಿವಾಟು ನಡೆಸಲು ಪ್ರಯತ್ನಿಸಿದಾಗ
- ಲಿಂಕ್‌ಗಳು, ಇ-ಮೇಲ್‌ಗಳು, ಚಾಟ್ ಸಂಭಾಷಣೆಗಳು, ಪ್ರತಿಕ್ರಿಯೆಗಳು, ನೋಟಿಫಿಕೇಶನ್‌ಗಳು, ಪ್ಲಾಟ್‌ಫಾರ್ಮ್‌ಗಳು ಕಳುಹಿಸಿದ ಅಥವಾ ಮಾಲೀಕತ್ವದ ಜಾಹೀರಾತುಗಳನ್ನು ಆ್ಯಕ್ಸೆಸ್ ಮಾಡಿದಾಗ ಮತ್ತು ನೀವು ನಮ್ಮ ಸಾಂದರ್ಭಿಕ ಸಮೀಕ್ಷೆಗಳಲ್ಲಿ ಭಾಗವಹಿಸಲು ಆಯ್ಕೆ ಮಾಡಿಕೊಂಡಾಗ.
- ಇಲ್ಲದಿದ್ದರೆ ನಿಮ್ಮ PhonePe ಬಳಕೆದಾರ ಖಾತೆಯನ್ನು ರಚಿಸುವುದು ಸೇರಿದಂತೆ ಯಾವುದೇ Indus ಅಂಗಸಂಸ್ಥೆಗಳು/ಸಂಸ್ಥೆಗಳು/ಅಧೀನ ಸಂಸ್ಥೆಗಳು/ಸಹವರ್ತಿಗಳೊಂದಿಗೆ ವ್ಯವಹಸಿದಾಗ. ನಿಮ್ಮ ಸಂಬಂಧಿತ ಪ್ರೊಫೈಲ್ ಮಾಹಿತಿ, ನೀವು ಒದಗಿಸಬಹುದಾದ ಹೆಸರು, ಇಮೇಲ್ ಐಡಿ, ಇತರ ಪ್ರೊಫೈಲ್ ವಿವರಗಳನ್ನು ಒಳಗೊಂಡಂತೆ ಆದರೆ ಇವುಗಳಿಗೆ ಸೀಮಿತವಾಗಿರುವುದಿಲ್ಲ. ಇವು PhonePe ಆ್ಯಪ್‌ನಾದ್ಯಂತ ಸಾಮಾನ್ಯವಾಗಿರಲಿದೆ.
- Indusನಲ್ಲಿ ವೃತ್ತಿ ಅವಕಾಶಗಳಿಗಾಗಿ ಅರ್ಜಿ ಸಲ್ಲಿಸುವಾಗ ಅಥವಾ ಉದ್ಯೋಗ ಉದ್ದೇಶಗಳಿಗಾಗಿ Indusನಲ್ಲಿ ಸೇರುವಾಗ
ಮಾಹಿತಿಯ ಉದ್ದೇಶ ಮತ್ತು ಬಳಕೆ
Indus ನಿಮ್ಮ ವೈಯಕ್ತಿಕ ಮಾಹಿತಿಯನ್ನು ಈ ಕೆಳಗಿನ ಉದ್ದೇಶಗಳಿಗಾಗಿ ಪ್ರಕ್ರಿಯೆಗೊಳಿಸಬಹುದು:
- ನಿಮ್ಮ ಖಾತೆಯ ರಚನೆ ಮತ್ತು ನಿಮ್ಮ ಗುರುತು ಮತ್ತು ಆ್ಯಕ್ಸೆಸ್ ಸವಲತ್ತುಗಳ ಪರಿಶೀಲನೆ
- ನಾವು, ಅಂಗಸಂಸ್ಥೆಗಳು, ಅಧೀನ ಸಂಸ್ಥೆಗಳು, ಸಹವರ್ತಿಗಳು ಅಥವಾ ವ್ಯವಹಾರ ಪಾಲುದಾರರು ನೀಡುತ್ತಿರುವ ಉತ್ಪನ್ನಗಳು ಮತ್ತು ಸೇವೆಗಳಿಗೆ ಆ್ಯಕ್ಸೆಸ್ ಒದಗಿಸುತ್ತೇವೆ.
- Appstoreನಲ್ಲಿ ಹುಡುಕಾಟ ಕಾರ್ಯವನ್ನು ಸಕ್ರಿಯಗೊಳಿಸುವುದಕ್ಕಾಗಿ ಆಡಿಯೊ ಪ್ರಶ್ನೆಗಳನ್ನು ಸೆರೆಹಿಡಿಯಲು
- ನಿಮ್ಮ ಪ್ರಶ್ನೆಗಳು, ವಹಿವಾಟುಗಳು ಮತ್ತು/ಅಥವಾ ಯಾವುದೇ ಇತರ ಅವಶ್ಯಕತೆಗಳಿಗಾಗಿ ನಿಮ್ಮೊಂದಿಗೆ ಸಂವಹನ ನಡೆಸಲು
- ನೀವು ಎದುರಿಸುತ್ತಿರುವ ಯಾವುದೇ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಸಂವಹನ ಮಾಹಿತಿಯನ್ನು ವಿಶ್ಲೇಷಿಸಲು. ಉದಾಹರಣೆಗೆ, ನೀವು ಕೊನೆಯದಾಗಿ ಯಾವಾಗ ಅಪ್‌ಲೋಡ್ ಮಾಡಿದ್ದೀರಿ/ ಪರಿವರ್ತಿಸಿದ್ದೀರಿ/ ಕ್ರಮ ತೆಗೆದುಕೊಂಡಿದ್ದೀರಿ, ನಮ್ಮ ಸೇವೆಗಳನ್ನು ಬಳಸಿದ್ದೀರಿ ಅಥವಾ ಅಂತಹುದೇ ಚಟುವಟಿಕೆಗಳನ್ನು ನಿರ್ವಹಿಸಿದ್ದೀರಿ ಎಂಬುದನ್ನು ನೋಡಲು.
- Indus App store ಅಥವಾ Indusನಿಂದ ನೀವು ಡೌನ್‌ಲೋಡ್ ಮಾಡುವ ಯಾವುದೇ ಆ್ಯಪ್‌ನ ದೋಷ ಪರಿಹಾರಗಳು, ಸುಧಾರಿತ ವೈಶಿಷ್ಟ್ಯಗಳು, ಕಾಣೆಯಾದ ಪ್ಲಗ್-ಇನ್‌ಗಳು ಮತ್ತು ಹೊಸ ಆವೃತ್ತಿಗಳ (ಅಪ್‌ಡೇಟ್‌ಗಳು) ಕುರಿತು ನಿಮಗೆ ಮಾಹಿತಿ ಮತ್ತು ಪರಿಹಾರಗಳನ್ನು ನೀಡಲು.
- ನಿಮಗೆ ಪ್ರಸ್ತುತವಾಗಬಹುದಾದ ಇತರ ಆ್ಯಪ್‌ಗಳನ್ನು ಶಿಫಾರಸು ಮಾಡಲು ನಾವು ನಿಮ್ಮ ಇನ್‌ಸ್ಟಾಲ್ ಮಾಡಲಾದ ಆ್ಯಪ್‌ಗಳ ಕುರಿತು ಮಾಹಿತಿಯನ್ನು ಬಳಸಬಹುದು.
- ಸಂಬಂಧಿತ ಆ್ಯಪ್‌ಗಳು ಮತ್ತು ವೀಡಿಯೊಗಳನ್ನು ಸೂಚಿಸಲು ಮತ್ತು ಬಳಕೆದಾರರ ನಡವಳಿಕೆಯನ್ನು ಒಟ್ಟಾರೆಯಾಗಿ ವಿಶ್ಲೇಷಿಸುವ ಮೂಲಕ ವಿವಿಧ ಪ್ರಕ್ರಿಯೆಗಳು/ ಅಪ್ಲಿಕೇಶನ್ ಸಲ್ಲಿಕೆಗಳು/ ಉತ್ಪನ್ನಗಳು/ ಸೇವೆಗಳ ಬಳಕೆಯಲ್ಲಿ ನಿಮ್ಮ ಅನುಭವವನ್ನು ಸುಧಾರಿಸಲು.
- ನಿಮಗೆ ಆ್ಯಪ್‌ಗಳು ಮತ್ತು ನೋಟಿಫಿಕೇಶನ್‌ಗಳ ಸೇವೆಯನ್ನು ಕಸ್ಟಮೈಸ್ ಮಾಡಲು ಮತ್ತು Appstoreನಲ್ಲಿ ಆ್ಯಪ್‌ಗಳನ್ನು ನಿರ್ವಹಿಸಲು ಮತ್ತು ಅನ್‌ಇನ್‌ಸ್ಟಾಲ್ ಮಾಡಲು ನಿಮಗೆ ಸಹಾಯ ಮಾಡುವುದಕ್ಕಾಗಿ ಮತ್ತು ವಿಶ್ಲೇಷಣಾ ಸೇವೆಯನ್ನು ಒದಗಿಸಲು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಅನುಭವವನ್ನು ಸುಧಾರಿಸಲು ನೆರವಾಗುವುದಕ್ಕೆ.
- ನಿಮ್ಮ ಬಗ್ಗೆ ನಮ್ಮಲ್ಲಿರುವ ಡೇಟಾವನ್ನು ಬಳಸಿಕೊಂಡು ನಿಮ್ಮ ಬಳಕೆದಾರ ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಸಕ್ರಿಯಗೊಳಿಸಲು.
- ಉತ್ಪನ್ನಗಳು/ಸೇವೆಗಳನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡಲು ಮತ್ತು ಪರಿಶೀಲಿಸಲು; ನಿಮ್ಮ ಅನುಭವವನ್ನು ಸುರಕ್ಷಿತ ಮತ್ತು ಸುಲಭಗೊಳಿಸಲು ಸೇವೆಗಳನ್ನು ಕಸ್ಟಮೈಸ್ ಮಾಡಲು ಮತ್ತು ಲೆಕ್ಕಪರಿಶೋಧನೆಗಳನ್ನು ನಡೆಸಲು
- ಪ್ಲಾಟ್‌ಫಾರ್ಮ್‌ಗಳು ಅಥವಾ ಥರ್ಡ್ ಪಾರ್ಟಿ ಲಿಂಕ್‌ಗಳ ಮೂಲಕ ನೀವು ಪಡೆದ/ವಿನಂತಿಸಿದ ಉತ್ಪನ್ನಗಳು ಮತ್ತು ಸೇವೆಗಳಿಗಾಗಿ ಥರ್ಡ್ ಪಾರ್ಟಿಗಳು ನಿಮ್ಮನ್ನು ಸಂಪರ್ಕಿಸಲು ಅನುಮತಿಸುವುದಕ್ಕಾಗಿ.
- ಭದ್ರತಾ ಉಲ್ಲಂಘನೆಗಳು ಮತ್ತು ದಾಳಿಗಳನ್ನು ಪತ್ತೆಹಚ್ಚಲು; ಖಾತೆಗಳು ಮತ್ತು ಚಟುವಟಿಕೆಗಳನ್ನು ಪರಿಶೀಲಿಸಲು, ನಮ್ಮ ಸೇವೆಗಳ ಸುರಕ್ಷತೆ ಮತ್ತು ಭದ್ರತೆಯನ್ನು ಉತ್ತೇಜಿಸಲು, ಉದಾಹರಣೆಗೆ ಅನುಮಾನಾಸ್ಪದ ಅಥವಾ ಕಾನೂನುಬಾಹಿರ ಚಟುವಟಿಕೆಗಳನ್ನು (ವಂಚನೆ ಅಥವಾ ಹಣ ವರ್ಗಾವಣೆ ಸೇರಿದಂತೆ) ತನಿಖೆ ಮಾಡಲು ಮತ್ತು ಅವುಗಳನ್ನು ತಡೆಯಲು ಮತ್ತು ಭಾರತ ಅಥವಾ ವಿದೇಶಗಳಲ್ಲಿ ಆಂತರಿಕ, ಬಾಹ್ಯ ಅಥವಾ ಸರ್ಕಾರಿ ತನಿಖೆಗಳಿಗಾಗಿ ವಿಧಿವಿಜ್ಞಾನ ಲೆಕ್ಕಪರಿಶೋಧನೆಗಳನ್ನು ನಡೆಸಲು
- ಮಾರುಕಟ್ಟೆ ಸಂಶೋಧನಾ ಉದ್ದೇಶಗಳಿಗಾಗಿ ನಿಮ್ಮನ್ನು ಸಂಪರ್ಕಿಸಲು ನಮ್ಮ ನಿಯಮಗಳು ಮತ್ತು ಷರತ್ತುಗಳನ್ನು ಜಾರಿಗೊಳಿಸುವ ಉದ್ದೇಶಕ್ಕಾಗಿ; ಆನ್‌ಲೈನ್ ಮತ್ತು ಆಫ್‌ಲೈನ್ ಕೊಡುಗೆಗಳು, ಉತ್ಪನ್ನಗಳು, ಸೇವೆಗಳು ಮತ್ತು ಅಪ್‌ಡೇಟ್‌ಗಳ ಬಗ್ಗೆ ನಿಮಗೆ ತಿಳಿಸಲು; ಮಾರ್ಕೆಟಿಂಗ್, ಜಾಹೀರಾತುಗಳನ್ನು ಪ್ರಸ್ತುತಪಡಿಸುವುದು ಮತ್ತು ಸೂಕ್ತವಾದ ಉತ್ಪನ್ನಗಳು ಮತ್ತು ಕೊಡುಗೆಗಳನ್ನು ನೀಡುವ ಮೂಲಕ ನಿಮ್ಮ ಅನುಭವವನ್ನು ಕಸ್ಟಮೈಸ್ ಮಾಡಲು ಮತ್ತು ಸುಧಾರಿಸಲು.
- ನಿಮ್ಮ ಅನುಭವ ಮತ್ತು ನಮ್ಮ ಸೇವೆಗಳ ಒಟ್ಟಾರೆ ಗುಣಮಟ್ಟವನ್ನು ಸುಧಾರಿಸುವುದಕ್ಕಾಗಿ ಕುಕೀಸ್ ಮತ್ತು ಇತರ ತಂತ್ರಜ್ಞಾನಗಳಿಂದ ಮಾಹಿತಿಯನ್ನು ಬಳಸಲು.
- ಸಮೀಕ್ಷೆಗಳು ಮತ್ತು ಸಂಶೋಧನೆಗಳನ್ನು ನಡೆಸಲು, ಅಭಿವೃದ್ಧಿಯಲ್ಲಿನ ವೈಶಿಷ್ಟ್ಯಗಳನ್ನು ಪರೀಕ್ಷಿಸಲು ಮತ್ತು ಮಾಹಿತಿಯನ್ನು ವಿಶ್ಲೇಷಿಸಲು, ನಾವು ಉತ್ಪನ್ನಗಳು ಮತ್ತು ಸೇವೆಗಳನ್ನು ಮೌಲ್ಯಮಾಪನ ಮಾಡುವುದಕ್ಕಾಗಿ ಮತ್ತು ಸುಧಾರಿಸುವುದಕ್ಕಾಗಿ, ಹೊಸ ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಆಡಿಟ್ ಮತ್ತು ದೋಷನಿವಾರಣೆ ಚಟುವಟಿಕೆಗಳನ್ನು ನಡೆಸಲು.
- ನಮ್ಮ ಜಾಹೀರಾತು ಮತ್ತು ಮಾಪನ ವ್ಯವಸ್ಥೆಗಳನ್ನು ಸುಧಾರಿಸಲು, ಇದರಿಂದ ನಾವು ನಿಮಗೆ ಸಂಬಂಧಿತ ಜಾಹೀರಾತುಗಳನ್ನು ತೋರಿಸಬಹುದು ಮತ್ತು ಜಾಹೀರಾತುಗಳು ಮತ್ತು ಸೇವೆಗಳ ಪರಿಣಾಮಕಾರಿತ್ವ ಮತ್ತು ವ್ಯಾಪ್ತಿಯನ್ನು ಅಳೆಯಬಹುದು.
- ನಮ್ಮ ಸೇವೆಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ವಿಶ್ಲೇಷಿಸಲು, ಜಾಹೀರಾತುಗಳು ಮತ್ತು ಸೇವೆಗಳ ಪರಿಣಾಮಕಾರಿತ್ವವನ್ನು ಅಳೆಯಲು, ಗ್ರಾಹಕ ಸೇವೆಯನ್ನು ಒದಗಿಸಲು ಇತ್ಯಾದಿಗಳಿಗಾಗಿ ನಮ್ಮ ವ್ಯವಹಾರವನ್ನು ಬೆಂಬಲಿಸುವ ಮಾರಾಟಗಾರರು, ಸೇವಾ ಪೂರೈಕೆದಾರರು ಮತ್ತು ಇತರ ಪಾಲುದಾರರೊಂದಿಗೆ ಜಾಹೀರಾತು ಐಡಿಗಳಂತಹ ಮಾಹಿತಿಯನ್ನು ಹಂಚಿಕೊಳ್ಳಲು.
- ನಮ್ಮೊಂದಿಗಿನ ನಿಮ್ಮ ಸಂವಹನದ ಸಮಯದಲ್ಲಿ ಒದಗಿಸಲಾದ ಬೆಂಬಲ/ಸಲಹೆಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ನಮ್ಮ ಪ್ರತಿನಿಧಿಗಳು ಮತ್ತು ಏಜೆಂಟರಿಗೆ ತರಬೇತಿ ನೀಡುವುದಕ್ಕಾಗಿ.
- ವಿವಾದಗಳನ್ನು ಪರಿಹರಿಸಲು; ಸಮಸ್ಯೆಗಳನ್ನು ನಿವಾರಿಸಲು; ತಾಂತ್ರಿಕ ಬೆಂಬಲ ಮತ್ತು ದೋಷಗಳನ್ನು ಸರಿಪಡಿಸಲು; ಸುರಕ್ಷಿತ ಸೇವೆಯನ್ನು ಉತ್ತೇಜಿಸಲು ನೆರವಾಗಲು.
- ಕಾನೂನು ಬಾಧ್ಯತೆಗಳನ್ನು ಪೂರೈಸಲು
ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಇತರ ಕಾನೂನುಬದ್ಧ ವ್ಯವಹಾರ ಉದ್ದೇಶಗಳಿಗಾಗಿ ಪ್ರಕ್ರಿಯೆಗೊಳಿಸಬಹುದು, ಆದರೆ ಸಂಸ್ಕರಣೆಯನ್ನು ಕಡಿಮೆ ಮಾಡಲು ಮತ್ತು ಸಾಧ್ಯವಾದಷ್ಟು ನಿಮ್ಮ ಗೌಪ್ಯತೆಯನ್ನು ಗೌರವಿಸುವಂತೆ ಮಾಡಲು ನಾವು ಕ್ರಮಗಳನ್ನು ಕೈಗೊಳ್ಳುತ್ತೇವೆ.
ಕುಕೀಸ್ ಅಥವಾ ಅಂತಹುದೇ ತಂತ್ರಜ್ಞಾನಗಳು
ನಮ್ಮ ವೆಬ್ ಪೇಜ್ ಫ್ಲೋ ಅನ್ನು ವಿಶ್ಲೇಷಿಸಲು, ಪ್ರಚಾರದ ಪರಿಣಾಮಕಾರಿತ್ವವನ್ನು ಮಾಪನ ಮಾಡಲು, ನಮ್ಮ ಪ್ಲಾಟ್‌ಫಾರ್ಮ್‌ನ ಬಳಕೆಯನ್ನು ಅರ್ಥಮಾಡಿಕೊಳ್ಳಲು ಮತ್ತು ನಂಬಿಕೆ ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ನಾವು ಪ್ಲಾಟ್‌ಫಾರ್ಮ್‌ನ ಕೆಲವು ಪೇಜ್‌ಗಳಲ್ಲಿ “ಕುಕೀಸ್” ಅಥವಾ ಅಂತಹುದೇ ತಂತ್ರಜ್ಞಾನಗಳಂತಹ ಡೇಟಾ ಸಂಗ್ರಹ ಸಾಧನಗಳನ್ನು ಬಳಸುತ್ತೇವೆ. “ಕುಕೀಸ್” ಎಂದರೆ ನಿಮ್ಮ ಸಾಧನದ ಹಾರ್ಡ್ ಡ್ರೈವ್/ಸ್ಟೋರೇಜ್‌ನಲ್ಲಿ ಇರಿಸಲಾದ ಸಣ್ಣ ಫೈಲ್‌ಗಳು. ಅದು ನಮ್ಮ ಸೇವೆಗಳನ್ನು ಒದಗಿಸುವಲ್ಲಿ ನಮಗೆ ಸಹಾಯ ಮಾಡುತ್ತದೆ. ಕುಕೀಗಳು ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವುದಿಲ್ಲ. ನಾವು “ಕುಕೀ” ಅಥವಾ ಅಂತಹುದೇ ತಂತ್ರಜ್ಞಾನಗಳನ್ನು ಬಳಸಿಕೊಂಡು ಲಭ್ಯವಿರುವ ಕೆಲವು ವೈಶಿಷ್ಟ್ಯಗಳನ್ನು ಮಾತ್ರ ನೀಡುತ್ತೇವೆ. ಸೆಷನ್‌ನಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನು ಆದಷ್ಟು ಕಡಿಮೆ ಬಾರಿ ನಮೂದಿಸಲು ನಾವು ಕುಕೀಗಳನ್ನು ಬಳಸುತ್ತೇವೆ. ನಿಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಮಾಹಿತಿಯನ್ನು ಒದಗಿಸಲು ಕುಕೀಸ್ ಅಥವಾ ಅಂತಹುದೇ ತಂತ್ರಜ್ಞಾನಗಳು ನಮಗೆ ನೆರವಾಗಬಹುದು. ಹೆಚ್ಚಿನ ಕುಕೀಗಳು “ಸೆಷನ್ ಕುಕೀಗಳು”, ಅಂದರೆ ಸೆಷನ್‌ನ ಕೊನೆಯಲ್ಲಿ ಅವುಗಳನ್ನು ನಿಮ್ಮ ಸಾಧನದ ಹಾರ್ಡ್-ಡ್ರೈವ್/ಸ್ಟೋರೇಜ್‌ನಿಂದ ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ. ನಿಮ್ಮ ಬ್ರೌಸರ್ ಅಥವಾ ಸಾಧನವು ಅನುಮತಿಸಿದರೆ ನೀವು ನಮ್ಮ ಕುಕೀಗಳನ್ನು ನಿರಾಕರಿಸಬಹುದು/ ಅಳಿಸಬಹುದು. ಆದರೆ ಕೆಲವು ವೈಶಿಷ್ಟ್ಯಗಳು ಕಾರ್ಯನಿರ್ವಹಿಸದೇ ಇರಬಹುದು. ಅಲ್ಲದೇ ನೀವು ಸೆಷನ್ ಸಮಯದಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನು ಹೆಚ್ಚು ಬಾರಿ ನಮೂದಿಸಬೇಕಾಗಬಹುದು. ಹೆಚ್ಚುವರಿಯಾಗಿ, ಕೆಲವು ಪ್ಲಾಟ್‌ಫಾರ್ಮ್ ಪುಟಗಳಲ್ಲಿ ನೀವು ಥರ್ಡ್ ಪಾರ್ಟಿಗಳಿಂದ ಇರಿಸಲಾದ ಕುಕೀಗಳು ಅಥವಾ ಅಂತಹುದೇ ತಂತ್ರಜ್ಞಾನಗಳನ್ನು ಕಾಣಬಹುದು. ನಾವು ಅವುಗಳ ಬಳಕೆಯನ್ನು ನಿಯಂತ್ರಿಸುವುದಿಲ್ಲ.
ಮಾಹಿತಿ ಹಂಚಿಕೆ ಮತ್ತು ಬಹಿರಂಗಪಡಿಸುವಿಕೆಗಳು
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಅನುಮತಿಸಿದಂತೆ, ಸರಿಯಾದ ಅಭ್ಯಾಸಗಳನ್ನು ಅನುಸರಿಸಿ ಮತ್ತು ಈ ಪಾಲಿಸಿಯಲ್ಲಿ ನಿಗದಿಪಡಿಸಿದ ಉದ್ದೇಶಗಳಿಗೆ ಅನುಗುಣವಾಗಿ ಹಂಚಿಕೊಳ್ಳಲಾಗುತ್ತದೆ.
ನಿಮ್ಮ ವಹಿವಾಟಿನ ಸಮಯದಲ್ಲಿ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ವ್ಯಾಪಾರ ಪಾಲುದಾರರು, ಸೇವಾ ಪೂರೈಕೆದಾರರು, ಅಂಗಸಂಸ್ಥೆಗಳು, ಸಹವರ್ತಿಗಳು, ಅಧೀನ ಸಂಸ್ಥೆಗಳು, ನಿಯಂತ್ರಕ ಸಂಸ್ಥೆಗಳು, ಆಂತರಿಕ ತಂಡಗಳು ಮುಂತಾದ ವಿವಿಧ ವರ್ಗಗಳ ಅಡಿಯಲ್ಲಿ ಬರುವ ಸ್ವೀಕರಿಸುವವರೊಂದಿಗೆ ಹಂಚಿಕೊಳ್ಳಬಹುದು.
ವೈಯಕ್ತಿಕ ಮಾಹಿತಿಯನ್ನು ಅನ್ವಯವಾಗುವ ರೀತಿಯಲ್ಲಿ, ತಿಳಿದುಕೊಳ್ಳಬೇಕಾದ ಅಗತ್ಯದ ಆಧಾರದ ಮೇಲೆ, ಈ ಕೆಳಗಿನ ಉದ್ದೇಶಗಳಿಗಾಗಿ ಹಂಚಿಕೊಳ್ಳಲಾಗುತ್ತದೆ:
- ಅನ್ವಯವಾಗಿದ್ದರೆ, PhonePe ಕೊಡುಗೆಗಳಿಗಾಗಿ ಸಾಮಾನ್ಯ ಲಾಗಿನ್ ಅನ್ನು ರಚಿಸುವುದು
- ನೀವು ಪಡೆಯುವ ಆ್ಯಪ್‌ಗಳು/ಸೇವೆಗಳ ನಿಬಂಧನೆಯನ್ನು ಸಕ್ರಿಯಗೊಳಿಸಲು ಮತ್ತು ನಿಮ್ಮ ಮತ್ತು ಸೇವಾ ಪೂರೈಕೆದಾರರು/ಡೆವಲಪರ್ ನಡುವೆ ವಿನಂತಿಸಿದಂತೆ ಸೇವೆಗಳನ್ನು ಸುಗಮಗೊಳಿಸಲು
- ಸಂವಹನ, ಮಾರ್ಕೆಟಿಂಗ್ ಮತ್ತು ಜಾಹೀರಾತು, ದತ್ತಾಂಶ ಮತ್ತು ಮಾಹಿತಿ ಸಂಗ್ರಹಣೆ, ಪ್ರಸರಣ, ಭದ್ರತೆ, ವಿಶ್ಲೇಷಣೆ, ವಂಚನೆ ಪತ್ತೆ, ಅಪಾಯದ ಮೌಲ್ಯಮಾಪನ ಮತ್ತು ಸಂಶೋಧನೆಗೆ ಸಂಬಂಧಿಸಿದ ಸೇವೆಗಳಿಗಾಗಿ
- ನಿಮ್ಮ ಸಾಧನದಲ್ಲಿ ನಮ್ಮ ಸೇವೆಗಳನ್ನು ವೈಯಕ್ತೀಕರಿಸಲು ಮತ್ತು ಸುಧಾರಿಸಲು
- Indus App store ಮತ್ತು ಅದರಲ್ಲಿ ಲಭ್ಯವಿರುವ ಇತರ ಆ್ಯಪ್‌ಗಳ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ಒದಗಿಸಲು.
- ನಮ್ಮ ನಿಯಮಗಳು ಅಥವಾ ಗೌಪ್ಯತಾ ನೀತಿಯನ್ನು ಜಾರಿಗೊಳಿಸುವುದು; ಜಾಹೀರಾತು, ಪೋಸ್ಟ್ ಮಾಡುವುದು ಅಥವಾ ಇತರ ವಿಷಯವು ಥರ್ಡ್ ಪಾರ್ಟಿಯ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬ ಕ್ಲೈಮ್‌ಗಳಿಗೆ ಪ್ರತಿಕ್ರಿಯಿಸುವುದು; ಅಥವಾ ನಮ್ಮ ಬಳಕೆದಾರರ ಅಥವಾ ಸಾರ್ವಜನಿಕರ ಹಕ್ಕುಗಳು, ಆಸ್ತಿ ಅಥವಾ ವೈಯಕ್ತಿಕ ಸುರಕ್ಷತೆಯನ್ನು ರಕ್ಷಿಸುವುದು.
- ಕಾನೂನಿನ ಪ್ರಕಾರ ಅಗತ್ಯವಿದ್ದರೆ ಅಥವಾ ಸಮನ್ಸ್, ನ್ಯಾಯಾಲಯದ ಆದೇಶಗಳು ಅಥವಾ ಇತರ ಕಾನೂನು ಪ್ರಕ್ರಿಯೆಗಳಿಗೆ ಪ್ರತಿಕ್ರಿಯಿಸುವುದು ಅಗತ್ಯವೆಂದು ನಾವು ಭಾವಿಸಿದರೆ ನಾವು ಮಾಹಿತಿಯನ್ನು ಹಂಚಿಕೊಳ್ಳಬಹುದು.
- ಸರ್ಕಾರಿ ಅಧಿಕಾರಿಗಳು ಸರ್ಕಾರಿ ಉಪಕ್ರಮಗಳು ಮತ್ತು ಪ್ರಯೋಜನಗಳಿಗಾಗಿ ವಿನಂತಿಸಿದರೆ
- ಕುಂದುಕೊರತೆ ಪರಿಹಾರ ಮತ್ತು ವಿವಾದಗಳ ಪರಿಹಾರಕ್ಕಾಗಿ
- Indusನೊಳಗಿನ ಆಂತರಿಕ ತನಿಖಾ ಇಲಾಖೆ ಅಥವಾ ಭಾರತೀಯ ನ್ಯಾಯವ್ಯಾಪ್ತಿಯೊಳಗೆ ಅಥವಾ ಹೊರಗೆ ಇರುವ ತನಿಖಾ ಉದ್ದೇಶಗಳಿಗಾಗಿ Indus ನೇಮಿಸಿದ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳಬಹುದು.
- ನಾವು (ಅಥವಾ ನಮ್ಮ ಸ್ವತ್ತುಗಳು) ಯಾವುದೇ ವ್ಯವಹಾರ ಘಟಕದೊಂದಿಗೆ ವಿಲೀನಗೊಳ್ಳಲು ಅಥವಾ ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದರೆ, ಅಥವಾ ಇತರ ವ್ಯವಹಾರ ಘಟಕದೊಂದಿಗೆ ನಮ್ಮ ವ್ಯವಹಾರವನ್ನು ಮರು-ಸಂಘಟಿಸುವುದು, ವಿಲೀನಗೊಳಿಸುವುದು, ಪುನರ್ರಚಿಸಲು ಯೋಜಿಸಿದರೆ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಬಹುದು.
ಈ ಪಾಲಿಸಿಯಲ್ಲಿ ನಿಗದಿಪಡಿಸಿದ ಉದ್ದೇಶಗಳ ಪ್ರಕಾರ ಮಾಹಿತಿಯನ್ನು ಥರ್ಡ್ ಪಾರ್ಟಿಗಳೊಂದಿಗೆ ಹಂಚಿಕೊಳ್ಳಲಾಗಿದ್ದರೂ, ನಿಮ್ಮ ವೈಯಕ್ತಿಕ ಮಾಹಿತಿಯ ಪ್ರಕ್ರಿಯೆಯನ್ನು ಅವರ ಪಾಲಿಸಿಗಳಿಂದ ನಿಯಂತ್ರಿಸಲಾಗುತ್ತದೆ. ಅನ್ವಯವಾಗುವಲ್ಲೆಲ್ಲ ಮತ್ತು ಸಾಧ್ಯವಾದಷ್ಟು ಮಟ್ಟಿಗೆ, ಈ ಥರ್ಡ್ ಪಾರ್ಟಿಗಳ ಮೇಲೆ ಕಠಿಣ ಅಥವಾ ಕನಿಷ್ಠ ಪಕ್ಷ ಅಷ್ಟೇ ಕಟ್ಟುನಿಟ್ಟಾಗಿ ಗೌಪ್ಯತೆ ಸಂರಕ್ಷಣಾ ಬಾಧ್ಯತೆಗಳನ್ನು ವಿಧಿಸುವುದನ್ನು Indus ಖಚಿತಪಡಿಸುತ್ತದೆ. ಆದರೂ, ಈ ಪಾಲಿಸಿಯಲ್ಲಿ ನಿಗದಿಪಡಿಸಿದ ಉದ್ದೇಶಗಳ ಪ್ರಕಾರ ಅಥವಾ ಅನ್ವಯವಾಗುವ ಕಾನೂನುಗಳ ಪ್ರಕಾರ, ನಿಯಂತ್ರಕ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳಂತಹ ಥರ್ಡ್ ಪಾರ್ಟಿಗಳೊಂದಿಗೆ Indus ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಹುದು. ಈ ಥರ್ಡ್ ಪಾರ್ಟಿಗಳು ಅಥವಾ ಅವರ ಪಾಲಿಸಿಗಳಿಂದ ನಿಮ್ಮ ವೈಯಕ್ತಿಕ ಮಾಹಿತಿಯ ಬಳಕೆಗೆ ಸಂಬಂಧಿಸಿದಂತೆ ನಾವು ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ಸ್ವೀಕರಿಸುವುದಿಲ್ಲ.
ಸಂಗ್ರಹಣೆ ಮತ್ತು ಉಳಿಸಿಕೊಳ್ಳುವಿಕೆ
ಅನ್ವಯವಾಗುವ ಮಟ್ಟಿಗೆ, ನಾವು ವೈಯಕ್ತಿಕ ಮಾಹಿತಿಯನ್ನು ಭಾರತದೊಳಗೆ ಸಂಗ್ರಹಿಸುತ್ತೇವೆ ಮತ್ತು ಅನ್ವಯವಾಗುವ ಕಾನೂನುಗಳಿಗೆ ಅನುಸಾರವಾಗಿ ಮತ್ತು ಅದನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗಿದೆಯೋ ಅದಕ್ಕಿಂತ ಹೆಚ್ಚಿನ ಅವಧಿಗೆ ಉಳಿಸಿಕೊಳ್ಳುತ್ತೇವೆ. ಆದರೂ, ವಂಚನೆ ಅಥವಾ ಭವಿಷ್ಯದ ದುರುಪಯೋಗವನ್ನು ತಡೆಗಟ್ಟುವುದು ಅಗತ್ಯವೆಂದು ನಾವು ಭಾವಿಸಿದರೆ ಅಥವಾ ಕಾನೂನಿನಿಂದ ಅಗತ್ಯವಿದ್ದರೆ, ಉದಾಹರಣೆಗೆ ಯಾವುದೇ ಕಾನೂನು/ನಿಯಂತ್ರಕ ಪ್ರಕ್ರಿಯೆಯ ಸಮಯದಲ್ಲಿ, ಯಾವುದೇ ಕಾನೂನು/ನಿಯಂತ್ರಕ ನಿರ್ದೇಶನವನ್ನು ಸ್ವೀಕರಿಸುವಾಗ ಅಥವಾ ಇತರ ಕಾನೂನುಬದ್ಧ ಉದ್ದೇಶಗಳಿಗಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಉಳಿಸಿಕೊಳ್ಳಬಹುದು. ವೈಯಕ್ತಿಕ ಮಾಹಿತಿಯು ಅದರ ಉಳಿಸಿಕೊಳ್ಳುವಿಕೆಯ ಅವಧಿಯನ್ನು ತಲುಪಿದ ನಂತರ, ಅನ್ವಯವಾಗುವ ಕಾನೂನುಗಳಿಗೆ ಅನುಸಾರವಾಗಿ ಅದನ್ನು ಅಳಿಸಲಾಗುತ್ತದೆ.
ಸಮಂಜಸ ಭದ್ರತಾ ಅಭ್ಯಾಸಗಳು
ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು Indus ತಾಂತ್ರಿಕ ಮತ್ತು ಭೌತಿಕ ಭದ್ರತಾ ಕ್ರಮಗಳನ್ನು ನಿಯೋಜಿಸಿದೆ. ನಮ್ಮ ಭದ್ರತಾ ಕ್ರಮಗಳು ಎಷ್ಟೇ ಪರಿಣಾಮಕಾರಿಯಾಗಿದ್ದರೂ, ಯಾವುದೇ ಭದ್ರತಾ ವ್ಯವಸ್ಥೆಯು ಮುರಿಯಲು ಸಾಧ್ಯವಾಗದಷ್ಟು ಬಲಿಷ್ಠವಾಗಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ, ನಮ್ಮ ಸಮಂಜಸವಾದ ಭದ್ರತಾ ಅಭ್ಯಾಸಗಳ ಭಾಗವಾಗಿ, ನಮ್ಮ ನೆಟ್‌ವರ್ಕ್ ಮತ್ತು ಸರ್ವರ್‌ಗಳಲ್ಲಿ ಚಾಲನೆಯಲ್ಲಿರುವ ಡೇಟಾ ಮತ್ತು ವಿಶ್ರಾಂತಿಯಲ್ಲಿರುವ ಡೇಟಾ ಎರಡಕ್ಕೂ ಸರಿಯಾದ ಮಾಹಿತಿ ಸುರಕ್ಷತೆ, ಎನ್‌ಕ್ರಿಪ್ಶನ್ ಮತ್ತು ನಿಯಂತ್ರಣಗಳನ್ನು ಖಚಿತಪಡಿಸಿಕೊಳ್ಳಲು ನಾವು ಕಟ್ಟುನಿಟ್ಟಾದ ಆಂತರಿಕ ಮತ್ತು ಬಾಹ್ಯ ವಿಮರ್ಶೆಗಳನ್ನು ನಡೆಸುತ್ತೇವೆ. ಡೇಟಾಬೇಸ್ ಅನ್ನು ಫೈರ್‌ವಾಲ್‌ನಿಂದ ರಕ್ಷಿಸಲ್ಪಟ್ಟ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ; ಆ್ಯಕ್ಸೆಸ್ ಪಾಸ್‌ವರ್ಡ್‌ನಿಂದ ಸುರಕ್ಷಿತವಾಗಿದೆ ಮತ್ತು ಕಟ್ಟುನಿಟ್ಟಾಗಿ ಸೀಮಿತವಾಗಿದೆ. ಇದಲ್ಲದೆ, ನಿಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ನ ಗೌಪ್ಯತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿರುತ್ತದೆ. ದಯವಿಟ್ಟು ನಿಮ್ಮ ಪ್ಲಾಟ್‌ಫಾರ್ಮ್‌ಗಳ ಲಾಗಿನ್, ಪಾಸ್‌ವರ್ಡ್ ಮತ್ತು OTP ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಮಾಹಿತಿಯು ಸೋರಿಕೆಯಾಗಿದೆ (ಅಥವಾ ಇತರರಿಗೆ ಬಹಿರಂಗಪಡಿಸಲಾಗಿದೆ) ಎಂದು ನಿಮಗೆ ಅನುಮಾನ ಉಂಟಾದರೆ ಅಥವಾ ನಿಮಗೆ ಕಂಡುಬಂದರೆ, ತಕ್ಷಣ ನಮಗೆ ತಿಳಿಸುವುದು ನಿಮ್ಮ ಜವಾಬ್ದಾರಿಯಾಗಿದೆ.
ಥರ್ಡ್ ಪಾರ್ಟಿ ಉತ್ಪನ್ನಗಳು, ಸೇವೆಗಳು ಅಥವಾ ವೆಬ್‌ಸೈಟ್‌ಗಳು
ನೀವು ಪ್ಲಾಟ್‌ಫಾರ್ಮ್‌ಗಳಲ್ಲಿ ಸೇವಾ ಪೂರೈಕೆದಾರರ ಉತ್ಪನ್ನಗಳು ಮತ್ತು ಸೇವೆಗಳನ್ನು ಪಡೆಯುತ್ತಿರುವಾಗ, ವೈಯಕ್ತಿಕ ಮಾಹಿತಿಯನ್ನು ಆಯಾ ಸೇವಾ ಪೂರೈಕೆದಾರರು ಸಂಗ್ರಹಿಸಬಹುದು ಮತ್ತು ಅಂತಹ ವೈಯಕ್ತಿಕ ಮಾಹಿತಿಯನ್ನು ಅವರ ಗೌಪ್ಯತೆ ನೀತಿಯಿಂದ ನಿಯಂತ್ರಿಸಲಾಗುತ್ತದೆ. ಅಂತಹ ಸೇವಾ ಪೂರೈಕೆದಾರರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೀವು ಅವರ ಗೌಪ್ಯತೆ ನೀತಿ ಮತ್ತು ಸೇವಾ ನಿಯಮಗಳನ್ನು ಉಲ್ಲೇಖಿಸಬಹುದು. ನೀವು ನಮ್ಮ ಪ್ಲಾಟ್‌ಫಾರ್ಮ್‌ಗಳಿಗೆ ಭೇಟಿ ನೀಡಿದಾಗ ನಮ್ಮ ಸೇವೆಗಳು ಇತರ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳಿಗೆ ಲಿಂಕ್‌ಗಳನ್ನು ಒಳಗೊಂಡಿರಬಹುದು. ಅಂತಹ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳು ನಮ್ಮ ನಿಯಂತ್ರಣಕ್ಕೆ ಮೀರಿದ ಆಯಾ ಗೌಪ್ಯತೆ ನೀತಿಗಳಿಂದ ನಿಯಂತ್ರಿಸಲ್ಪಟ್ಟಿ ತ್ತವೆ. ನೀವು ನಮ್ಮ ಸರ್ವರ್‌ಗಳನ್ನು ತೊರೆದ ನಂತರ (ನಿಮ್ಮ ಬ್ರೌಸರ್‌ನಲ್ಲಿರುವ ಲೊಕೇಶನ್ ಬಾರ್‌ನಲ್ಲಿರುವ ಅಥವಾ ನಿಮ್ಮನ್ನು ಮರುನಿರ್ದೇಶಿಸಲಾದ ಎಂ-ಸೈಟ್‌ನಲ್ಲಿರುವ URL ಅನ್ನು ಪರಿಶೀಲಿಸುವ ಮೂಲಕ ನೀವು ಎಲ್ಲಿದ್ದೀರಿ ಎಂಬುದನ್ನು ನೀವು ತಿಳಿದುಕೊಳ್ಳಬಹುದು), ಈ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳಲ್ಲಿ ನೀವು ಒದಗಿಸುವ ಯಾವುದೇ ವೈಯಕ್ತಿಕ ಮಾಹಿತಿಯ ಬಳಕೆಯನ್ನು ನೀವು ಭೇಟಿ ನೀಡುವ ಅಪ್ಲಿಕೇಶನ್/ವೆಬ್‌ಸೈಟ್‌ನ ಆಪರೇಟರ್‌ನ ಗೌಪ್ಯತೆ ನೀತಿಯಿಂದ ನಿಯಂತ್ರಿಸಲಾಗುತ್ತದೆ. ಆ ಪಾಲಿಸಿಯು ನಮ್ಮ ಪಾಲಿಸಿಗಿಂತ ಭಿನ್ನವಾಗಿರಬಹುದು ಮತ್ತು ಆ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳನ್ನು ಬಳಸಲು ಮುಂದುವರಿಯುವ ಮೊದಲು ಆ ಪಾಲಿಸಿಗಳನ್ನು ಪರಿಶೀಲಿಸಬೇಕೆಂದು ಅಥವಾ ಡೊಮೇನ್ ಮಾಲೀಕರಿಂದ ಪಾಲಿಸಿಗಳಿಗೆ ಆ್ಯಕ್ಸೆಸ್ ಅನ್ನು ಪಡೆಯಬೇಕೆಂದು ನಿಮ್ಮನ್ನು ವಿನಂತಿಸುತ್ತೇವೆ. ಈ ಥರ್ಡ್ ಪಾರ್ಟಿಗಳು ಅಥವಾ ಅವರ ಪಾಲಿಸಿಗಳಿಂದ ನಿಮ್ಮ ವೈಯಕ್ತಿಕ ಮಾಹಿತಿಯ ಬಳಕೆಗೆ ಸಂಬಂಧಿಸಿದಂತೆ ನಾವು ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆಯನ್ನು ಸ್ವೀಕರಿಸುವುದಿಲ್ಲ. ಪ್ಲಾಟ್‌ಫಾರ್ಮ್‌ಗಳು ಚಾಟ್ ರೂಮ್‌ಗಳು, ಫೋರಂಗಳು, ಸಂದೇಶ ಬೋರ್ಡ್‌ಗಳು, ಪ್ರತಿಕ್ರಿಯೆ ಫಾರ್ಮ್‌ಗಳು, ವೆಬ್ ಲಾಗ್‌ಗಳು / “ಬ್ಲಾಗ್‌ಗಳು”, ಸುದ್ದಿ ಗುಂಪುಗಳು ಮತ್ತು / ಅಥವಾ ಇತರ ಸಾರ್ವಜನಿಕ ಸಂದೇಶ ವೇದಿಕೆಗಳನ್ನು ನಿಮಗೆ ಲಭ್ಯವಾಗುವಂತೆ ಮಾಡಬಹುದು. ಇವುಗಳಲ್ಲಿ ನೀವು ಬಹಿರಂಗಪಡಿಸುವ ಯಾವುದೇ ಮಾಹಿತಿಯು ಸಾರ್ವಜನಿಕ ಮಾಹಿತಿಯಾಗುತ್ತದೆ ಎಂಬುದನ್ನು ದಯವಿಟ್ಟು ನೆನಪಿಡಿ, ಮತ್ತು ಅವುಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ಬಹಿರಂಗಪಡಿಸಬಾರದು.
ನಿಮ್ಮ ಸಮ್ಮತಿ
ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಒಪ್ಪಿಗೆಯೊಂದಿಗೆ ಪ್ರಕ್ರಿಯೆಗೊಳಿಸುತ್ತೇವೆ. ಪ್ಲಾಟ್‌ಫಾರ್ಮ್‌ಗಳು ಅಥವಾ ಸೇವೆಗಳನ್ನು ಬಳಸುವ ಮೂಲಕ ಮತ್ತು/ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸುವ ಮೂಲಕ, ಈ ಗೌಪ್ಯತಾ ನೀತಿಗೆ ಅನುಸಾರವಾಗಿ Indus ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪ್ರಕ್ರಿಯೆಗೊಳಿಸಲು ನೀವು ಸಮ್ಮತಿಸುತ್ತೀರಿ. ಇತರ ಜನರಿಗೆ ಸಂಬಂಧಿಸಿದ ಯಾವುದೇ ವೈಯಕ್ತಿಕ ಮಾಹಿತಿಯನ್ನು ನೀವು ನಮಗೆ ಬಹಿರಂಗಪಡಿಸಿದರೆ, ನಿಮಗೆ ಹಾಗೆ ಮಾಡಲು ಅಧಿಕಾರವಿದೆ ಎಂದು ನೀವು ಪ್ರತಿನಿಧಿಸುತ್ತೀರಿ ಮತ್ತು ಈ ಗೌಪ್ಯತಾ ನೀತಿಗೆ ಅನುಸಾರವಾಗಿ ಮಾಹಿತಿಯನ್ನು ಬಳಸಲು ನಮಗೆ ಅನುಮತಿ ನೀಡುತ್ತೀರಿ. ನೀವು ಯಾವುದೇ ಅಧಿಕೃತ DND ನೋಂದಣಿಗಳೊಂದಿಗೆ ನೋಂದಾಯಿಸಿಕೊಂಡಿದ್ದರೂ, ಈ ಪಾಲಿಸಿಯಲ್ಲಿ ಉಲ್ಲೇಖಿಸಲಾದ ಉದ್ದೇಶಗಳಿಗಾಗಿ ಫೋನ್ ಕರೆಗಳು ಮತ್ತು ಇ-ಮೇಲ್‌ನಂತಹ ಮಾರ್ಗಗಳ ಮೂಲಕ ನಿಮ್ಮನ್ನು ಸಂಪರ್ಕಿಸಲು ನೀವು ಒಪ್ಪುತ್ತೀರಿ ಮತ್ತು ನಮಗೆ ಅಧಿಕಾರ ನೀಡುತ್ತೀರಿ.
ಆಯ್ಕೆ/ಆಯ್ಕೆಯಿಂದ ಹೊರಗುಳಿಯುವುದು
ಖಾತೆಯನ್ನು ಸೆಟಪ್ ಮಾಡಿದ ನಂತರ, ನಮ್ಮ ಯಾವುದೇ ಸೇವೆಗಳನ್ನು ಅಥವಾ ನಮ್ಮಿಂದ ಅನಿವಾರ್ಯವಲ್ಲದ (ಪ್ರಚಾರ, ಮಾರ್ಕೆಟಿಂಗ್-ಸಂಬಂಧಿತ) ಸಂವಹನಗಳನ್ನು ಸ್ವೀಕರಿಸುವುದರಿಂದ ಹೊರಗುಳಿಯುವ ಅವಕಾಶವನ್ನು ನಾವು ಎಲ್ಲ ಬಳಕೆದಾರರಿಗೆ ಒದಗಿಸುತ್ತೇವೆ. ನಮ್ಮ ಎಲ್ಲ ಪಟ್ಟಿಗಳು ಮತ್ತು ನ್ಯೂಸ್‌ಲೆಟರ್‌ಗಳಿಂದ ನಿಮ್ಮ ಸಂಪರ್ಕ ಮಾಹಿತಿಯನ್ನು ತೆಗೆದುಹಾಕಲು ಅಥವಾ ನಮ್ಮ ಯಾವುದೇ ಸೇವೆಗಳನ್ನು ನಿಲ್ಲಿಸಲು ನೀವು ಬಯಸಿದರೆ, ದಯವಿಟ್ಟು ಇಮೇಲ್‌ಗಳಲ್ಲಿನ ಅನ್‌ಸಬ್‌ಸ್ಕ್ರೈಬ್ ಬಟನ್ ಅನ್ನು ಕ್ಲಿಕ್ ಮಾಡಬಹುದು ಅಥವಾ ಪ್ಲಾಟ್‌ಫಾರ್ಮ್‌ಗಳಲ್ಲಿನ ‘ಬೆಂಬಲ’ ವಿಭಾಗದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು.
ನಮ್ಮ ಉತ್ಪನ್ನಗಳು/ಸೇವೆಗಳಿಗಾಗಿ ನೀವು ಕರೆಯನ್ನು ಸ್ವೀಕರಿಸಿದರೆ, ಕರೆಯ ಸಮಯದಲ್ಲಿ ನಮ್ಮ ಪ್ರತಿನಿಧಿಗೆ ತಿಳಿಸುವ ಮೂಲಕ ನೀವು ಅಂತಹ ಕರೆಗಳಿಂದ ಹೊರಗುಳಿಯಬಹುದು.
ವೈಯಕ್ತಿಕ ಮಾಹಿತಿ ಆ್ಯಕ್ಸೆಸ್/ಸರಿಪಡಿಸುವಿಕೆ
ನಮ್ಮಲ್ಲಿ ವಿನಂತಿಯನ್ನು ಸಲ್ಲಿಸುವ ಮೂಲಕ ನೀವು ಹಂಚಿಕೊಂಡಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ಆ್ಯಕ್ಸೆಸ್ ಮಾಡಬಹುದು ಮತ್ತು ಪರಿಶೀಲಿಸಬಹುದು. ಮೇಲಿನ ಯಾವುದೇ ವಿನಂತಿಗಳನ್ನು ಸಲ್ಲಿಸಲು, ಈ ಪಾಲಿಸಿಯಲ್ಲಿರುವ ‘ನಮ್ಮನ್ನು ಸಂಪರ್ಕಿಸಿ’ ವಿಭಾಗದ ಅಡಿಯಲ್ಲಿ ಒದಗಿಸಲಾದ ಸಂಪರ್ಕ ಮಾಹಿತಿಯನ್ನು ಬಳಸಿಕೊಂಡು ನೀವು ನಮಗೆ ವಿನಂತಿಯನ್ನು ಬರೆಯಬಹುದು. ನಿಮ್ಮ ಖಾತೆ ಅಥವಾ ವೈಯಕ್ತಿಕ ಮಾಹಿತಿಯನ್ನು ಅಳಿಸಲು ನೀವು ಬಯಸಿದರೆ, ದಯವಿಟ್ಟು ಪ್ಲಾಟ್‌ಫಾರ್ಮ್‌ಗಳಲ್ಲಿನ ‘ಬೆಂಬಲ’ ವಿಭಾಗದ ಮೂಲಕ ನಮ್ಮನ್ನು ಸಂಪರ್ಕಿಸಿ. ಆದರೂ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಉಳಿಸಿಕೊಳ್ಳುವುದು ಅನ್ವಯವಾಗುವ ಕಾನೂನುಗಳಿಗೆ ಒಳಪಟ್ಟಿರುತ್ತದೆ. ಮೇಲಿನ ವಿನಂತಿಗಳಿಗಾಗಿ, ನಿಮ್ಮ ಗುರುತನ್ನು ದೃಢೀಕರಿಸಲು ಮತ್ತು ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು Indus ನಿಮ್ಮಿಂದ ನಿರ್ದಿಷ್ಟ ಮಾಹಿತಿಯನ್ನು ವಿನಂತಿಸಬೇಕಾಗಬಹುದು. ವೈಯಕ್ತಿಕ ಮಾಹಿತಿಯನ್ನು ಆ್ಯಕ್ಸೆಸ್ ಮಾಡಲು ಯಾವುದೇ ಹಕ್ಕಿಲ್ಲದ ಯಾರೊಂದಿಗೂ ಹಂಚಿಕೊಳ್ಳಬಾರದು ಮತ್ತು ತಪ್ಪಾಗಿ ಮಾರ್ಪಡಿಸಬಾರದು ಅಥವಾ ಅಳಿಸಬಾರದು ಎಂದು ಖಚಿತಪಡಿಸಿಕೊಳ್ಳಲು ಇದು ಭದ್ರತಾ ಕ್ರಮವಾಗಿದೆ. ನೀವು ಬಳಸುತ್ತಿರುವ ಪ್ಲಾಟ್‌ಫಾರ್ಮ್‌ಗಳ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ, ಪ್ಲಾಟ್‌ಫಾರ್ಮ್‌ಗಳಲ್ಲಿ ಸುಲಭವಾಗಿ ಆ್ಯಕ್ಸೆಸ್ ಮಾಡಬಹುದಾದ ನಿಯಮಗಳು ಮತ್ತು ಷರತ್ತುಗಳನ್ನು ಓದಬೇಕೆಂದು ನಾವು ನಿಮ್ಮನ್ನು ವಿನಂತಿಸುತ್ತೇವೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಪ್ಲಾಟ್‌ಫಾರ್ಮ್‌ಗಳಲ್ಲಿನ ‘ಬೆಂಬಲ’ ವಿಭಾಗದ ಮೂಲಕ ನಮ್ಮನ್ನು ಸಂಪರ್ಕಿಸಬಹುದು.
ಮಕ್ಕಳ ಮಾಹಿತಿ
ನಾವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಂದ ವೈಯಕ್ತಿಕ ಮಾಹಿತಿಯನ್ನು ತಿಳಿದೂ ಕೇಳುವುದಿಲ್ಲ ಅಥವಾ ಸಂಗ್ರಹಿಸುವುದಿಲ್ಲ ಮತ್ತು ನಮ್ಮ ಪ್ಲಾಟ್‌ಫಾರ್ಮ್‌ಗಳ ಬಳಕೆಯು ಭಾರತೀಯ ಒಪ್ಪಂದ ಕಾಯ್ದೆ, 1872 ರ ಅಡಿಯಲ್ಲಿ ಕಾನೂನುಬದ್ಧವಾಗಿ ಒಪ್ಪಂದವನ್ನು ರೂಪಿಸಬಹುದಾದ ವ್ಯಕ್ತಿಗಳಿಗೆ ಮಾತ್ರ ಲಭ್ಯವಿದೆ. ನೀವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನಿಮ್ಮ ಪೋಷಕರು, ಕಾನೂನು ಪ್ರಕಾರದ ಪಾಲಕರು ಅಥವಾ ಯಾವುದೇ ಜವಾಬ್ದಾರಿಯುತ ವಯಸ್ಕರ ಮೇಲ್ವಿಚಾರಣೆಯಲ್ಲಿ ನೀವು ಪ್ಲಾಟ್‌ಫಾರ್ಮ್‌ಗಳು ಅಥವಾ ಸೇವೆಗಳನ್ನು ಬಳಸಬೇಕು.
ಪಾಲಿಸಿಯಲ್ಲಿ ಬದಲಾವಣೆಗಳು
ನಿಮಗೆ ಯಾವುದೇ ಪೂರ್ವ ಲಿಖಿತ ಸೂಚನೆ ನೀಡದೆ ಯಾವುದೇ ಸಮಯದಲ್ಲಿ ಈ ಗೌಪ್ಯತಾ ನೀತಿಯ ಭಾಗಗಳನ್ನು ಬದಲಾಯಿಸುವ, ಮಾರ್ಪಡಿಸುವ, ಸೇರಿಸುವ ಅಥವಾ ತೆಗೆದುಹಾಕುವ ಹಕ್ಕನ್ನು ನಾವು ನಮ್ಮ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿದ್ದೇವೆ. ಆದರೂ, ಬದಲಾವಣೆಗಳ ಬಗ್ಗೆ ನಿಮಗೆ ತಿಳಿಸಲು ನಾವು ಸಮಂಜಸವಾಗಿ ಪ್ರಯತ್ನಿಸಬಹುದು, ಅಪ್‌ಡೇಟ್‌ಗಳು/ಬದಲಾವಣೆಗಳಿಗಾಗಿ ಗೌಪ್ಯತಾ ನೀತಿಯನ್ನು ನಿಯತಕಾಲಿಕವಾಗಿ ಪರಿಶೀಲಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಬದಲಾವಣೆಗಳನ್ನು ಪೋಸ್ಟ್ ಮಾಡಿದ ನಂತರ ನೀವು ನಮ್ಮ ಸೇವೆಗಳು/ಪ್ಲಾಟ್‌ಫಾರ್ಮ್‌ಗಳನ್ನು ನಿರಂತರವಾಗಿ ಬಳಸುತ್ತಿದ್ದರೆ, ನೀವು ಪರಿಷ್ಕರಣೆಗಳನ್ನು ಒಪ್ಪಿಕೊಂಡಿದ್ದೀರಿ ಮತ್ತು ಒಪ್ಪುತ್ತೀರಿ ಎಂದರ್ಥ. ನೀವು ಈಗಾಗಲೇ ಹಂಚಿಕೊಂಡಿರುವ ವೈಯಕ್ತಿಕ ಮಾಹಿತಿಯ ರಕ್ಷಣೆಯನ್ನು ಕಡಿಮೆ ಮಾಡುವ ರೀತಿಯಲ್ಲಿ ನಮ್ಮ ಪಾಲಿಸಿಗಳನ್ನು ನಾವು ಎಂದಿಗೂ ಬದಲಾಯಿಸುವುದಿಲ್ಲ.
ನಮ್ಮನ್ನು ಸಂಪರ್ಕಿಸಿ
ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಈ ಗೌಪ್ಯತಾ ನೀತಿಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ನೀವು ಯಾವುದೇ ಪ್ರಶ್ನೆಗಳು, ಕಾಳಜಿಗಳು ಅಥವಾ ದೂರುಗಳನ್ನು ಹೊಂದಿದ್ದರೆ, ನೀವು ಪ್ಲಾಟ್‌ಫಾರ್ಮ್‌ಗಳಲ್ಲಿನ ‘ಬೆಂಬಲ’ ವಿಭಾಗದ ಮೂಲಕ ನಮ್ಮನ್ನು ಸಂಪರ್ಕಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಸಮಂಜಸವಾದ ಸಮಯದ ಮಿತಿಯೊಳಗೆ ಉತ್ತರಿಸಲು ನಾವು ಬದ್ಧರಾಗಿದ್ದೇವೆ. ಪರಿಹಾರ ಸಮಯದಲ್ಲಿ ಯಾವುದೇ ವಿಳಂಬವಾದರೆ ಅದನ್ನು ನಿಮಗೆ ಮುಂಚಿತವಾಗಿ ತಿಳಿಸಲಾಗುತ್ತದೆ.